‘ಉಜ್ವಲ’ ಯೋಜನೆಯಡಿ ಗ್ಯಾಸ್‍ಸ್ಟೌವ್ ನೀಡಲು ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Gas-Stow-001

ಬೆಂಗಳೂರು,ನ.3-ಉಜ್ವಲ ಯೋಜನೆಯಡಿ ಗ್ಯಾಸ್ ಸ್ಟೌವ್ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದರು.  ಕೇಂದ್ರ ಸರ್ಕಾರ ಕೇವಲ ರೆಗ್ಯೂಲೇಟರ್ ಮತ್ತು ಗ್ಯಾಸ್ ಪೈಪ್ ಮಾತ್ರ ಕೊಡುತ್ತದೆ. ರಾಜ್ಯ ಸರ್ಕಾರದಿಂದ ಉಚಿತವಾಗಿ ಸ್ಟೌವ್ ನೀಡಲು ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಹಿಂದೆ ಸಣ್ಣ ಸಿಲಿಂಡರ್ ಸೋಲಾರ್ ದೀಪ ನೀಡಲು ಉದ್ದೇಶಿಸಲಾಗಿತ್ತು, ಆದರೆ ಕಳೆದ 2011ರಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು, ಶೇ.50ರಷ್ಟು ಬಡವರು ಯೋಜನೆಯಿಂದ ವಂಚಿತರಾಗಿದ್ದಾರೆ. ಈಗಾಗಲೇ ಸಮೀಕ್ಷೆ ನಡೆಸುವುದಕ್ಕೆ ಕೋರಲಾಗಿದೆ ಎಂದು ಹೇಳಿದರು.

ಪಡಿತರ ಅಂಗಡಿಯಲ್ಲಿ ನೀಲಿ ಸೀಮೆಎಣ್ಣೆ ವಿತರಣೆ ಮುಂದುವರೆದಿದ್ದು , ಮುಕ್ತ ಮಾರುಕಟ್ಟೆಯಲ್ಲಿ ಬಿಳಿ ಸೀಮೆಎಣ್ಣೆ ದೊರೆಯಲಿದೆ ಎಂದರು.  ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು , ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕರಾವಳಿ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ಗೊಂದಲ ನಿವಾರಿಸುವಂತೆ ನಿಯೋಗ ಸಿದ್ದರಾಮಯ್ಯನವರಿಗೆ ಮನವಿ ಸಲಿಸಿತು ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin