ಉಡಾಫೆ ಉತ್ತರ ನೀಡುವ ಸಿಬ್ಬಂದಿಗಳ ವಿರುದ್ಧ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

1

ಬೇಲೂರು, ಅ.7- ಪುರಸಭೆಯ ಸಿಬ್ಬಂದಿಗಳು ಪುರಸಭಾ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಸದಸ್ಯ ಜಿ.ಶಾಂತಕುಮಾರ್ ಆರೋಪಿಸಿದ್ದಾರೆ.ಪುರಸಭೆಯಯಲ್ಲಿ ಅಧ್ಯಕ್ಷೆ ಉಮಾ(ಮುದ್ದಮ್ಮ)ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಎಇಇ ಪುರಸಭೆಯ ಕಾಮಗಾರಿಗಳ ಬಗ್ಗೆ ಸ್ಥಳವೀಕ್ಷಣೆ ಮಾಡದೆ ಗುತ್ತಿಗೆದಾರರಿಂದ ಹಣ ಪಡೆದು ಕಚೇರಿಯಲ್ಲೆ ಕುಳಿತು ಸಹಿ ಹಾಕುತ್ತಿದ್ದಾರೆ. ಇದರಿಂದ ಗುಣಮಟ್ಟದ ಕಾಮಗಾರಿಗಳು ಆಗುತ್ತಿಲ್ಲ ಎಂದರು.

ಪುರಸಭೆಯ ಸಿಬ್ಬಂದಿಗಳಿಗೆ ಸದಸ್ಯರ ಜೊತೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದು ತಿಳಿಯದೆ ಬೆಜವಾಬ್ದಾರಿ ಉತ್ತರಗಳನ್ನು ನೀಡುತ್ತಾರೆ. ನಾವುಗಳು ಸಾರ್ವಜನಿಕರ ಕೆಲಸಗಳನ್ನು ಯಾವ ರೀತಿ ಮಾಡಿಸುವುದು ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಕಾರ್ಯಕ್ರಮಗಳಲ್ಲಿ ನೀಡಲಾಗುವ ನೆನಪಿನಕಾಣಿಕೆ, ಹಣ್ಣಿನಬುಟ್ಟಿಗಳು, ಶಾಲುಗಳು, ಶಾಮಿಯಾನ ಮುಂತಾದವುಗಳಿಗೆ ಬಿಲ್ ಪಾವತಿಸುವ ಸಲುವಾಗಿ ಕೌನ್ಸಿಲ್ ಸಭೆಯ ಘಟನೋತ್ತರ ಮಂಜೂರಾತಿ ಕೋರುವ ವೇಳೆ ಮಾತನಾಡಿ, ಎಲ್ಲ ವಸ್ತುಗಳಿಗೂ ಇರುವ ಬೆಲೆಗಿಂತ ಹೆಚ್ಚಿನ ಬೆಲೆ ನಮೂದಾಗಿದ್ದು , ಈ ರೀತಿಯಾಗಿ ಅಗತ್ಯಕ್ಕಿಂತ ಹೆಚ್ಚಿನ ಬಿಲ್ ನೀಡಿದ್ದಾರೆ ಎಂದು ದೂರಿದರು.

ಪುರಸಭಾ ಅಧ್ಯಕ್ಷೆ ಉಮಾ(ಮುದ್ದಮ್ಮ) ಮಾತನಾಡಿ, ಮುಂದೆ ಬರುವ ಮುಖ್ಯಮಂತ್ರಿಗಳ 7.5ಕೋಟಿ ಅನುದಾನದಲ್ಲಿ ಎಲ್ಲಾ 23 ವಾರ್ಡ್‍ಗಳಲ್ಲಿ ಸಮಗ್ರ ಅಭಿವೃಧಿ ಕಾಮಗಾರಿಗಳನ್ನು ನಡೆಸಲಾಗುವುದು, ಬೆಜವಾಬ್ದಾರಿಯಿಂದ ನಡೆದುಕೊಳ್ಳುವ ಉಡಾಫೆ ಉತ್ತರ ನೀಡುವ ಸಿಂಬ್ಬದಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು .ಪುರಸಭಾ ಉಪಾಧ್ಯಕ್ಷ ಕುಮಾರಸ್ವಾಮಿ(ಅರುಣ್) ಮಾತನಾಡಿ, ಯಗಚಿ ಸೇತುವೆ ಬಳಿ ಇರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಅಯ್ಯಪ್ಪ ಮಾಲಾಧಾರಿಗಳಿಗೆ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖ್ಯಧಿಕಾರಿ ಬಿ.ಸಿ.ಬಸವರಾಜು, ಸದಸ್ಯ ಶ್ರೀನಿಧಿ ಹಾಗೂ ಪುರಸಭಾ ಸದಸ್ಯರುಗಳು ಹಾಜರಿದ್ದರು

 

 

► Follow us on –  Facebook / Twitter  / Google+

Facebook Comments

Sri Raghav

Admin