ಉಡುಪಿಯ ಶ್ರೀ ಕೃಷ್ಣ ಮೊರೆಹೋದ ಗಾಲಿ ಜನಾರ್ಧನ ರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--Udpi

ಉಡುಪಿ ,ಮಾ.2-ಕಷ್ಟದ ದಿನಗಳನ್ನು ಎದುರಿಸಿದ್ದ ನನಗೆ ಶ್ರೀ ಕೃಷ್ಣ ಪರಮಾತ್ಮನೇ ಶಕ್ತಿ ನೀಡಿ ರಕ್ಷಿಸಿದ್ದಾನೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಇಂದಿಲ್ಲಿ ಹೇಳಿದರು. ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ನಾನು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ನಾನು ಮಂತ್ರಿಯಾಗಿದ್ದಾಗ ದೇವರನ್ನು ನಂಬಿ ಪೂಜಿಸಿದ್ದೆ.   ನಂತರದ ರಾಜಕೀಯ ವಿದ್ಯಾಮಾನಗಳಲ್ಲಿ ನಾನು ಕಷ್ಟದ ದಿನಗಳನ್ನು ಎದುರಿಸಿದ್ದೇನೆ. ಶ್ರೀ ಕೃಷ್ಣನೇ ನನ್ನನ್ನು ಶಾಂತಿ, ನೆಮ್ಮದಿ ಕರುಣಿಸಿದ್ದಾನೆ ಎಂದು ಹೇಳಿದರು. ಸಹೋದರ ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಪರಸ್ಪರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರ ನಡುವಿನ ವೈಮನಸ್ಯವನ್ನು ಬಗೆಹರಿಸಲು ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಇದಕ್ಕೂ ಮುನ್ನ ಪೇಜಾವರ ಶ್ರೀಗಳ ಆಶೀರ್ವಾದ ಪಡೆದು ಮುಂದಿನ ಮೇ ತಿಂಗಳಿನಲ್ಲಿ ಅಳಿಯ , ಮಗಳ ಜೊತೆ ಮತ್ತೊಮ್ಮೆ ಶ್ರೀ ಕೃಷ್ಣನ ದರ್ಶನಕ್ಕಾಗಿ ಉಡುಪಿಗೆ ಬರುತ್ತೇನೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin