ಉತ್ತಮ ವ್ಯಕ್ತಿಗಳಿಗೆ ಮತಹಾಕುವಂತೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Santosh-Hegde--01

ಬೆಂಗಳೂರು, ಮೇ 12- ಮತದಾನ ಎಲ್ಲರ ಹಕ್ಕು. ಉತ್ತಮ ವ್ಯಕ್ತಿಗಳಿಗೆ ಮತ ಹಾಕಬೇಕೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಸಲಹೆ ನೀಡಿದ್ದಾರೆ. ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವುದು ಒಳ್ಳೆಯ ಕೆಲಸ. ಅರ್ಹ, ಉತ್ತಮ ವ್ಯಕ್ತಿಗಳಿಗೆ ಮತಹಾಕಬೇಕೆಂದು ಹೇಳಿದರು. ಒಂದು ವೇಳೆ ಅಭ್ಯರ್ಥಿಗಳು ಉತ್ತಮವಾಗಿಲ್ಲ ಅನ್ನಿಸಿದರೆ ನೋಟಾಕ್ಕೆ ಮತ ಹಾಕಿ. ಒಟ್ಟಾರೆ ಮತದಾನ ಮಾಡುವುದನ್ನು ಮರೆಯಬೇಡಿ ಎಂದಿದ್ದಾರೆ. ಭ್ರಷ್ಟಾಚಾರ ಮೂರು ಪ್ರಮುಖ ಪಕ್ಷಗಳಲ್ಲೂ ಇದೆ. ಜನ ಕಳೆದ ಚುನಾವಣೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಪಾಠ ಕಲಿಸಿದ್ದಾರೆ. ಈಗ ಲೋಕಾಯುಕ್ತ ತೆಗೆದವರಿಗೂ ಕಲಿಸಲಿದ್ದಾರೆ ಎಂದು ಹೇಳಿದರು.

Facebook Comments

Sri Raghav

Admin