ಉತ್ತರಪ್ರದೇಶದಲ್ಲಿ ಬಿಜೆಪಿ ಜಯಭೇರಿ…! ಚುನಾವಣಾ ಸಮೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Uttar-Peradesdh

ನವದೆಹಲಿ, ಜ.5-ಐದು ರಾಜ್ಯಗಳಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿಗೊಳಿಸಿದ ಮರುದಿನವೇ, ಉತ್ತರಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಮುನ್ಸೂಚನೆ ನೀಡಿದೆ. 403 ಸದಸ್ಯ ಬಲದ ಉತ್ತರ ಪ್ರದೇಶ ವಿದಾನಸಭೆಯಲ್ಲಿ ಬಿಜೆಪಿ 206-216 ಸ್ಥಾನಗಳನ್ನು ಗಳಿಸಿ ಸರ್ಕಾರ ರಚಿಸಲಿದೆ ಎಂದು ಇಂಡಿಯಾ ಟುಡೆ ನಡೆಸಿದ ಚುನಾವಣಾ ಪೂರ್ವ ಅಭಿಪ್ರಾಯ ಸಂಗ್ರಹದಿಂದ ವ್ಯಕ್ತವಾಗಿದೆ.   ಉತ್ತರಪ್ರದೇಶದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ, ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಆಂತರಿಕ ಕಲಹ ಭುಗಿಲೆದ್ದಿದ್ದು ಈ ಬೆಳವಣಿಗೆ ಬಿಜೆಪಿ ಚುನಾವಣೆಯಲ್ಲಿ ನೆರವಾಗಲಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದತಿಯು ಬಿಜೆಪಿ ಮತ-ಹಂಚಿಕೆ ಮೇಲೆ ಪೂರಕ ಪರಿಣಾಮ ಬೀರಲಿದೆ ಎಂದು ಸಮೀಕ್ಷೆಯಲ್ಲಿ ವಿಶ್ಲೇಷಿಸಲಾಗಿದೆ.

ನ.8 ರಿಂದ ಜಾರಿಗೆ ಬಂದ ನೋಟು ರದ್ದತಿಗೆ ಮುನ್ನ ನಡೆಸಲಾದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ (ಅಕ್ಟೋಬರ್) ಬಿಜೆಪಿ ಮತ ಹಂಚಿಕೆಯು ಶೇಕಡ 31ರಷ್ಟು ಹೆಚ್ಚಳವಾಗಲಿದೆ ಎಂದು ಬಿಂಬಿಸಲಾಗಿತ್ತು. ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ಅದು ಶೇಖ 33ರಷ್ಟು ವೃದ್ಧಿಯಾಗಿದೆ. 403 ಸ್ಥಾನಗಳ ಪೈಕಿ ಬಿಜೆಪಿ 206-216ರಷ್ಟು ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ ಎಂದು ಸಮೀಕ್ಷೆಯಲ್ಲಿ ಭವಿಷ್ಯ ನುಡಿಯಲಾಗಿದೆ.   2012ರ ಉತ್ರರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.15ರಷ್ಟು ಮತ ಪಾಲು ಹೊಂದಿ 47 ಸ್ಥಾನಗಳನ್ನು ಗಳಿಸಿತ್ತು.. ಮುಂಬರುವ ಚುನಾವಣೆಯಲ್ಲಿ ಅದು ತಮ್ಮ ಮತ ಪಾಲನ್ನು ಐದು ಪಟ್ಟು ಹೆಚ್ಚಿಸಿಕೊಳ್ಳಲಿದೆ ಎಂದು ಬಿಂಬಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin