ಉತ್ತರಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 25 ಶಾಲಾ ಮಕ್ಕಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Schol-B-us-2

ಇಟಾ, ಜ. 19-ಮಂಜು ಮುಸುಕಿದ್ದರಿಂದ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ 25ಕ್ಕೂ ಹೆಚ್ಚು ಶಾಲಾ ಮಕ್ಕಳು ದಾರುಣ ಸಾವಿಗೀಡಾಗಿ, 36 ವಿದ್ಯಾರ್ಥಿಗಳು ಗಾಯಗೊಂಡಿರುವ ದುರಂತ ಘಟನೆ ಉತ್ತರಪ್ರದೇಶದ ಇಟಾ ಜಿಲ್ಲೆಯ ಅಲಿಗಂಜ್‍ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.  ದಟ್ಟ ಮಂಜಿನಿಂದಾಗಿ ಟ್ರಕ್ ಮತ್ತು ಶಾಲಾ ಬಸ್ ನಡುವೆ ಡಿಕ್ಕಿಯಾಗಿ 25 ಮಕ್ಕಳು ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡ 36 ಮಕ್ಕಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.

Schol-B-us-1

ಈ ದುರಂತದಲ್ಲಿ ಮೃತಪಟ್ಟ ಮಕ್ಕಳು ಅಲಿಗಂಜ್‍ನ ಜೆ.ಎಸ್. ವಿದ್ಯಾ ಪಬ್ಲಿಕ್ ಶಾಲೆಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಈ ಬಸ್‍ನಲ್ಲಿ 60ಕ್ಕೂ ಹೆಚ್ಚು ಮಕ್ಕಳಿದ್ದರು. ಅಲಿಗಂಜ್ ರಸ್ತೆಯಲ್ಲಿ ಮಂಜು ಕವಿದ ಕಾರಣ ಎದುರಿನಿಂದ ಬಂದ ಟ್ರಕ್ ಗೋಚರಿಸಲಿಲ್ಲ. ಇದರಿಂದಾಗಿ ಡಿಕ್ಕಿ ಅಪಘಾತ ಸಂಭವಿಸಿತು.  ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ದಟ್ಟ ಮಂಜಿನ ವಾತಾವರಣವಿದ್ದ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆಧರೆ ಜೆ.ಎಸ್.ವಿದ್ಯಾ ಪಬ್ಲಿಕ್ ಸ್ಕೂಲ್‍ಗೆ ರಜೆ ನೀಡಿರಲಿಲ್ಲ. ಶಾಲೆಯ ಈ ನಿರ್ಧಾರದಿಂದಾಗಿ ಮಕ್ಕಳು ದುರಂತ ಸಾವಿಗೀಡಾಗಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿ ಪೋಷಕರ ಮುಗಿಲು ಮುಟ್ಟಿದ ಆಕ್ರಂಧನ ಮತ್ತು ಕರುಳ ಕುಡಿಗಳನ್ನು ಕಳೆದಕೊಂಡು ಮಾತೆಯರು ರೋದಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಆ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮಕ್ಕಳ ರಕ್ತಸಿಕ್ತ ಬ್ಯಾಗ್‍ಗಳು, ಶೂಗಳು ಮತ್ತು ಊಟದ ಡಬ್ಬಿಗಳು ದುರಂತದ ಭೀಕರತೆಗೆ ಸಾಕ್ಷಿಯಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Bus 2

Bus 3

Bus 4

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin