ಉತ್ತರಪ್ರದೇಶದಲ್ಲಿ 389 ಹೆಂಡದ ದೊರೆಗಳ ಬಂಧನ, 11.5 ಕೋಟಿ ರೂ. ಮೌಲ್ಯದ ಮದ್ಯವಶ

ಈ ಸುದ್ದಿಯನ್ನು ಶೇರ್ ಮಾಡಿ

Arrested-01

ಘಜಿಯಾಬಾದ್ (ಉ.ಪ್ರ.), ಜ.27- ಉತ್ತರಪ್ರದೇಶದ ಘಜಿಯಾಬಾದ್ ವಿವಿಧೆಡೆ ಕಳೆದ 10 ತಿಂಗಳ ಅವಧಿಯಲ್ಲಿ 389 ಹೆಂಡದ ದೊರೆಗಳನ್ನು ಬಂಧಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು, 11.5 ಕೋಟಿ ರೂ. ಮೌಲ್ಯ ಅಕ್ರಮ ಮತ್ತು 200 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  ಏಪ್ರಿಲ್ 1, 2016 ಮತ್ತು ಜನವರಿ 25ರ ನಡುವೆ ಅಧಿಕಾರಿಗಳು 11.5 ಕೋಟಿ ರೂ. ಮೌಲ್ಯದ 2.70 ಲಕ್ಷ ಲೀಟರ್ ಭಾರತೀಯ ತಯಾರಿಕೆ ವಿದೇಶಿ ಮದ್ಯ (ಐಎಂಎಫ್‍ಎಲ್) ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 2,096 ಪ್ರಕರಣಗಳನ್ನು ಅಬಕಾರಿ ಕಾಯ್ದೆ ಅಡಿ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಕರುಣೇಂದ್ರ ಸಿಂಗ್ ತಿಳಿಸಿದ್ದಾರೆ.

ಹರಿಯಾಣದಿಂದ ಉತ್ತರಪ್ರದೇಶದ ಪೂರ್ವ ಭಾಗಕ್ಕೆ ಬಹುತೇಕ ಮದ್ಯ ಕಳ್ಳಸಾಗಣೆ ಮಾಡಲಾಗುತ್ತಿದ್ದ ಪ್ರಕರಣಗಳ ಸಂಬಂಧ ಈವರೆಗೆ 389 ಹೆಂಡದ ದೊರೆಗಳನ್ನು ಬಂಧಿಸಲಾಗಿದೆ. ಮದ್ಯ ಸಾಗಿಸಲು ಬಳಸಿದ್ದ 200ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.   ಈ ಅವಧಿಯಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರಿಗೆ ವಿತರಿಸಲು ಮದ್ಯವನ್ನು ಕೊಂಡೊಯ್ಯಲಾಗುತ್ತಿತ್ತು ಎಂಬುದನ್ನು ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಸಿಂಗ್ ಹೇಳಿದ್ಧಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin