ಉತ್ತರಪ್ರದೇಶದ ಬರೇಲಿ ಅರಣ್ಯದಲ್ಲಿ ಹೊತ್ತಿ ಉರಿದ ರಾಶಿರಾಶಿ ಹಣ..!

ಈ ಸುದ್ದಿಯನ್ನು ಶೇರ್ ಮಾಡಿ

Fire-05

ಲಖನೌ,ನ.10- ಕಾಳಧನ, ಖೋಟಾನೋಟು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ನಿಲುವಿನಿಂದ ಅನೇಕ ಅಕ್ರಮಗಳು ಬೆಳಕಿಗೆ ಬರುತ್ತಿದ್ದು ಉತ್ತರಪ್ರದೇಶದ ಬರೇಲಿ ಅರಣ್ಯದಲ್ಲಿ 500 ಮತ್ತು 1000 ರೂ.ಗಳ ರಾಶಿ ರಾಶಿ ನೋಟುಗಳ ಕಂತೆಗೆ ಬೆಂಕಿ ಹಚ್ಚಿರುವ ಪ್ರಕರಣ ಬೆಳಕಿಗೆ ಬಂದಿದೆ.  ರದ್ದಾದ ಅಧಿಕ ಮೌಲ್ಯದ ಹಣವನ್ನು ಗೋಣಿಚೀಲಗಳಲ್ಲಿ ತುಂಬಿ ನಂತರ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ರಾಶಿರಾಶಿ ನೋಟುಗಳು ಸುಟ್ಟು ಕರಕಲಾಗಿದ್ದು , ಆ ಪ್ರದೇಶದಲ್ಲಿ ದಟ್ಟ ಬೂದಿ ಆವರಿಸಿದೆ.  ಕಾಳಧನಿಕರು ಈ ಕೃತ್ಯ ಎಸಗಿರುವ ಶಂಕೆಯಿದ್ದು , ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin