ಉತ್ತರಪ್ರದೇಶದ ವಿಧಾನಸಭೆ ಅಧಿವೇಶದಲ್ಲಿ ಭಾರೀ ಗದ್ದಲ, ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

UP-Assembly

ಲಕ್ನೋ, ಮೇ 15- ಹೊಸದಾಗಿ ಚುನಾಯಿತವಾದ ಉತ್ತರಪ್ರದೇಶದ ವಿಧಾನಸಭೈ ಅಧಿವೇಶನದ ಆರಂಭದ ದಿನವೇ ಕಲಾಪದಲ್ಲಿ ಭಾರೀ ಗದ್ದಲ ಮತ್ತು ಕೋಲಾಹಲ ವಾತಾವರಣಕ್ಕೆ ಸಾಕ್ಷಿಯಾಯಿತು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧಪಕ್ಷಗಳ ಸದಸ್ಯರು ಪೋಡಿಯಂನತ್ತ ಕಾಗದದ ಚೆಂಡುಗಳನ್ನು ತೂರಿ ಪ್ರತಿಭಟನೆ ನಡೆಸಿದರು. ವಿಪಕ್ಷಗಳ ಸದಸ್ಯರಿಂದ ತೂರಿಬಂದ ಪೇಪರ್ ಬಾಲ್‍ಗಳನ್ನು ಮಾರ್ಷಲ್‍ಗಳು ಕಡತಗಳಿಂದ ದೂರ ಸರಿಸಬೇಕಾಯಿತು.ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ರಾಮ್ ನಾಯಕ್ ಇಂದು ಸಾಂಪ್ರದಾಯಿಕ ಭಾಷಣ ಆರಂಭಿಸುವುದಕ್ಕೆ ಮುನ್ನವೇ ವಿರೋಧಪಕ್ಷಗಳು ಸೃಷ್ಟಿಸಿದ ರಂಪಾಟದಿಂದ ಕೆಲಕಾಲ ಗದ್ದಲ-ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಸುಗಮ ಕಲಾಪಕ್ಕಾಗಿ ವಿಧಾನಸಭಾಧ್ಯಕ್ಷ ಹೃದಯ ನಾರಾಯಣ ದೀಕ್ಷಿತ್ ಸರ್ವಪಕ್ಷ ಸಭೈಯಲ್ಲಿ ಮನವಿ ಮಾಡಿದ್ದರೂ, ಅದನ್ನು ಲೆಕ್ಕಿಸದೇ ಸರ್ಕಾರದ ವಿರುದ್ಧ ಘೋಷಣಾ ಫಲಕಗಳೊಂದಿಗೆ ಏರಿದ ಧ್ವನಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿಪಕ್ಷದ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದರು.   ಈ ಗದ್ದಲದ ನಡುವೆಯೂ ರಾಜ್ಯಪಾಲರು ಭಾಷಣವನ್ನು ಓದಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಸಂದರ್ಭದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin