ಉತ್ತರಾಖಂಡದಲ್ಲಿ ಕಣಿವೆಗೆ ಬಸ್ ಬಿದ್ದು 24 ಯಾತ್ರಿಗಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

22-Dead

ಡೆಹ್ರಾಡೂನ್, ಮೇ 24- ಯಾತ್ರಾರ್ಥಿಗಳಿಂದ ಬಸ್ಸೊಂದು ಕಣಿವೆಗೆ ಬಿದ್ದು 24 ಮಂದಿ ಮೃತಪಟ್ಟ ದುರಂತ ಉತ್ತರಾಖಂಡದ ಉತ್ತರ ಕಾಶಿಯ ಧರಾಸು ಬಳಿ ನಿನ್ನೆ ರಾತ್ರಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಏಳು ಜನರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ.  ಮಧ್ಯಪ್ರದೇಶದ ಇಂದೋರ್‍ನಿಂದ ಚಾರ್‍ಧಾಮ್ ಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ಈ ಬಸ್‍ನಲ್ಲಿ 30 ಯಾತ್ರಾರ್ಥಿಗಳಿದ್ದರು. ಚಿನ್ಯಾಲಿಸೌರ ಮಾರ್ಗ ಮಧ್ಯೆ 250 ಮೀಟರ್ ಆಳದ ಪ್ರಪಾತಕ್ಕೆ ಈ ಬಸ್ ಉರುಳಿ ಬಿತ್ತು.24 ಮಂದಿ ಮೃತಪಟ್ಟಿದ್ದು, ಆರು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಅವಘಡದ ಸುದ್ದಿ ತಿಳಿದ ಕೂಡಲೇ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದರೂ, ಕಾರ್ಯಾಚರಣೆಗೆ ಕತ್ತಲು ತೊಡಕಾಗಿತು. ಕಣಿವೆಗೆ ಇಳಿಯಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಪರಿಹಾರ ಕಾರ್ಯಗಳು ಮುಂದುವರಿಯಿತು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರಾಮ್ ಸಿಂಗ್ ಮೀನಾ ತಿಳಿಸಿದ್ದಾರೆ.   ಮೃತರ ಕುಟುಂಬಗಳಿಗೆ ಉತ್ತರಾಖಂಡ ಸರ್ಕಾರ ತಲಾ 1 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ 2ಲಕ್ಷ ಪರಿಹಾರ ಪ್ರಕಟಿಸಲಾಗಿದೆ.

ಚಾರ್‍ಧಾಮ್ ಕ್ಷೇತ್ರಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಕಳೆದ ವರ್ಷ ಈ ಅವಧಿಯಲ್ಲಿ 4 ಲಕ್ಷಕ್ಕು ಹೆಚ್ಚು ಯಾತ್ರಿಗಳು ಭೇಟಿ ನೀಡದ್ದರು. ಈ ವರ್ಷ ಸಂಖ್ಯೆ ಎರಡರಷ್ಟು ಹೆಚ್ಚಾಗಿದೆ. ಪ್ರಯಾಣಿಕರು ಮತ್ತು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಿದ್ದರೂ, ಅಪಘಾತಗಳು ಮರುಕಳಿಸುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin