ಉತ್ತರ ಆಸ್ಟ್ರೇಲಿಯಾ ಮತ್ತು ಪೂರ್ವ ಇಂಡೋನೆಷ್ಯಾದಲ್ಲಿ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Earthwuake

ಕ್ಯಾನ್‍ಬೆರಾ/ಜಕಾರ್ತ, ಡಿ.21-ಉತ್ತರ ಆಸ್ಟ್ರೇಲಿಯಾ ಮತ್ತು ಪೂರ್ವ ಇಂಡೋನೆಷ್ಯಾದ ಕೆಲವು ಭಾಗಗಳಲ್ಲಿ ಭೂಕಂಪ ಸಂಭವಿಸಿದ್ದು, ಸಾವು-ನೋವು ಅಥವಾ ಆಸ್ತಿ-ಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ. ಆಸ್ಟ್ರೇಲಿಯಾದ ಡಾರ್ವಿನ್ ಮತ್ತು ದ್ವೀಪರಾಷ್ಟ್ರದ ಪೂರ್ವ ಭಾಗಗಳಲ್ಲಿ ನಿನ್ನೆ 6.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ತಿಳಿಸಿರುವ ಅಮೆರಿಕ ಭೂಗರ್ಭ ಅಧ್ಯಯನ ಇಲಾಖೆ, ಸುನಾಮಿ ಆತಂಕವನ್ನು ತಳ್ಳಿ ಹಾಕಿದೆ.  ಇಂಡೋನೆಷ್ಯಾ ಪೂರ್ವ ಟಿಮೊರ್‍ನ ಈಶ್ಯಾನಕ್ಕೆ 278 ಕಿ.ಮೀ.ದೂರದ ಡಿಲಿಯ 158 ಕಿ.ಮೀ. ಆಳದ ಭೂಗರ್ಭದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಆಸ್ಟ್ರೇಲಿಯಾದ ಭೂಗರ್ಭ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.

ಭೂಕಂಪದಿಂದ ಕಟ್ಟಡಗಳು ಮತ್ತು ಮನೆಗಳು ಕಂಪಿಸಿದವು ಎಂದು ಆಸ್ಟ್ರೇಲಿಯಾದ ಡಾರ್ವಿನ್ ಪ್ರದೇಶ ಹಾಗೂ ಇಂಡೋನೇಷ್ಯಾದ ಮೊಲುಕೊಯಾಸ್ ದ್ವೀಪದ ನಿವಾಸಿಗಳು ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin