ಉತ್ತರ ಕರ್ನಾಟಕದಲ್ಲಿ ಜಲಪ್ರಳಯ : ಬೀದರ್, ಕಲಬುರಗಿ, ರಾಯಚೂರು ತತ್ತರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24– ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆಯ ಅಬ್ಬರಕ್ಕೆ ಜಲಪ್ರಳಯವೇ ಉಂಟಾಗಿದೆ. ಬೀದರ್, ಕಲಬುರಗಿ, ರಾಯಚೂರಿನಲ್ಲಿ ಪ್ರವಾಹದಿಂದ ಜನಜೀವನ ತತ್ತರಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬೀದರ್‍ನ ಬಹುತೇಕ ಸೇತುವೆಗಳು ಮುಳುಗಿದ್ದು, 4 ಕೆರೆಗಳು ಒಡೆದು ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ತಗ್ಗುಪ್ರದೇಶಗಳು ಜಲಾವೃತವಾಗಿವೆ. 4 ಕೋಟಿ ವೆಚ್ಚದಲ್ಲಿ ರಿಪೇರಿಯಾಗಿದ್ದ ಔರಾದ್‍ನ ಆಲೂರು ಬೇಲೂರು ಕೆರೆ ಕಳಪೆ ಕಾಮಗಾರಿಯಿಂದ ಒಡೆದುಹೋಗಿದೆ.
ಇತ್ತ ನಾರಾಯಣಪುರ ಡ್ಯಾಂನಿಂದ ನೀರು ಬಿಟ್ಟಿರೋದ್ರಿಂದ ರಾಯಚೂರಿನಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಲಿಂಗಸಗೂರಿನ ನಡುಗುಡ್ಡೆಯಲ್ಲಿ ನೂರಕ್ಕೂ ಹೆಚ್ಚು ಮೇಕೆಗಳು ನೀರಲ್ಲಿ ಕೊಚ್ಚಿಹೋಗಿವೆ. ಹಲವು ಸೇತುಗಳ ಜಖಂಗೊಂಡಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

2d8a8eab-500e-44b8-873a-6d78031c3641

ಕಲಬುರಗಿಯಲ್ಲಿ ಕಳೆದ 50 ವರ್ಷದ ನಂತರ ದಾಖಲೆಯ 164 ಮಿಲಿ ಮೀಟರ್ ಮಳೆಯಾಗಿದ್ದು, ಡ್ಯಾಂಗಳೆಲ್ಲ ಭರ್ತಿಯಾಗಿ ಹಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಇನ್ನು ಕಲಬುರಗಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಸೇಡಂನ ಗರ್ಭಿಣಿ ರಾಧಿಕಾ ಎಂಬಾಕೆ ತ್ರಿವಳಿ ಮಕ್ಕಳಿಗೆ ಅಂಬುಲೆನ್ಸ್‍ನಲ್ಲಿಯೇ ಜನ್ಮ ನೀಡಿದ್ದಾರೆ. 108 ಸಿಬ್ಬಂದಿ ಸುಲಭ ಹೆರಿಗೆ ಮಾಡಿಸಿದ್ದರು. ತಾಯಿ-ಮಕ್ಕಳು ಆರೋಗ್ಯವಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದಾರೆ. ಈ ನಡುವೆ ಅತ್ತ ಆಂಧ್ರ ಹಾಗೂ ತೆಲಂಗಾಣದಲ್ಲಿ ಮಳೆಗೆ 13 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲೂ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಮುಂಜಾನೆಯೂ ತುಂತುರು ವರ್ಷಧಾರೆ ಆಗುತ್ತಿದೆ. 3f2d68fb-0e03-4b3d-af9d-7df6bd509a1f

7b5566d0-c8b8-44c7-8243-61bc875f61ee

abec787b-d539-4c32-b3d5-53c5e90f5bc2

b954b86e-373a-43f5-8063-5bc6d5e16eca

dc4659fa-2ac7-4454-92dc-8383b0aefef8

f0c0ecf2-b085-410b-99c1-d8a8f7193583

f6db5a1b-f6e4-496d-97c8-35e535517c1f

f10c5fbb-195e-4c21-aca4-c14d2f07d04f

 

► Follow us on –  Facebook / Twitter  / Google+

Facebook Comments

Sri Raghav

Admin