ಉತ್ತರ ಕೊರಿಯಾದಿಂದ ಮತ್ತೆ ಕ್ಷಿಪಣಿ ಉಡಾವಣೆ, ಟ್ರಂಪ್ ಕೆಂಡಾಮಂಡಲ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ಸಿಯೋಲ್(ದಕ್ಷಿಣ ಕೊರಿಯಾ), ಜು.4-ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಮಹಾ ಶಕ್ತಿಶಾಲಿ ರಾಷ್ಟ್ರ ಅಮೆರಿಕ ಎಚ್ಚರಿಕೆಯನ್ನು ಧಿಕ್ಕರಿಸಿ ಉತ್ತರ ಕೊರಿಯಾ ಇಂದು ಮತ್ತೊಂದು ಖಂಡಾಂತರ ಕ್ಷಿಪಣೆ ಉಡಾವಣೆ ಮಾಡಿದೆ. ಅಮೆರಿಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳಲು ಸಜ್ಜಾಗಿರುವಾಗಲೇ ಎಚ್ಚರಿಕೆ ನೀಡುವ ಧಾಟಿಯಲ್ಲಿ ಪಯೊಂಗ್‍ಯಾಂಗ್ ಪ್ರೇಕ್ಷೇಪಕ ಕ್ಷಿಪಣಿಯನ್ನು ಹಾರಿಸಿ ತನ್ನ ಮೊಂಡುತನ ಪ್ರದರ್ಶಿಸಿದೆ.  ದಕ್ಷಿಣ ಕೊರಿಯಾಗೆ ಸದಾ ಕಂಟಕವಾಗಿರುವ ಉತ್ತರ ಕೊರಿಯಾ, ರಾಜಧಾನಿ ಪಯೊಂಗ್‍ಯಾಂಗ್ ಸಮೀಪದ ಪಂಘ್‍ಯೊಂಗ್ ವಾಯುನೆಲೆಯಿಂದ ಹಾರಿಸಿದ ಕ್ಷಿಪಣಿಯು 37 ನಿಮಿಷಗಳ ನಂತರ ಜಪಾನ್ ಸಮುದ್ರದಲ್ಲಿ ನಿಖರ ಗುರಿಯತ್ತ ಇಳಿದಿದೆ.

ದಕ್ಷಿಣ ಕೊರಿಯಾದ ನೂತನ ನಾಯಕ ಮೂನ್ ಜಾಯಿ-ಇನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿ, ನಿರಂತರ ಕ್ಷಿಪಣಿ ಪ್ರಯೋಗಗಳೂ ಸೇರಿದಂತೆ ಉತ್ತರ ಕೊರಿಯಾದಿಂದ ಎದುರಾಗಿರುವ ಆತಂಕಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಪಯೊಂಗ್‍ಯಾಂಗ್ ತನ್ನ ಹಳೆ ಚಾಲಿ ಮುಂದುವರಿಸಿದೆ. ಉತ್ರರ ಕೊರಿಯಾ ಕ್ಷಿಪಣಿ ಪ್ರಯೋಗ ನಡೆಸಿರುವುದನ್ನು ದಕ್ಷಿಣ ಕೊರಿಯಾ ಸೇನೆ ಮತ್ತು ಅಮೆರಿಕ ಖಚಿತಪಡಿಸಿದೆ.

ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉತ್ತರ ಕೊರಿಯಾ ಅಗಾಗ ಕ್ಷಿಪಣಿಗಳನ್ನು ಹಾರಿಸುತ್ತಾ ನೆರೆ-ಹೊರೆ ದೇಶಗಳಿಗೆ ಆತಂಕವೊಡ್ಡಿದ್ದು, ಅಮೆರಿಕವನ್ನೂ ಕೆಣಕುತ್ತಿದೆ. ಉತ್ತರ ಕೊರಿಯಾದ ಉದ್ಧಟತನದಿಂದ ಕೆರಳಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಆತನಿಗೆ (ಸರ್ವಾಧಿಕಾರಿ ಕಿಮ್) ಜೀವನದಲ್ಲಿ ಮಾಡಲು ಬೇರೆ ಕೆಲಸ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಆ ದೇಶದ ಮೂರ್ಖತನಕ್ಕೆ ಪೂರ್ಣ ವಿರಾಮ ಹಾಕಲು ಏಕೆ ಕ್ರಮ ಕೈಗೊಳ್ಳಬಾರದು ಎಂದು ಚೀನಾವನ್ನು ಟ್ವೀಟ್‍ನಲ್ಲಿ ತಾಕೀತು ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin