ಉತ್ತರ ಕೊರಿಯಾ ಪ್ರಯೋಗಾರ್ಥ ಕ್ಷಿಪಣಿ ಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

North-koea

ಸಿಯೋಲ್, ಅ.20– ಅಣ್ವಸ್ತ್ರಗಳ ಪರೀಕ್ಷೆಗಳ ಮೂಲಕ ವಿಶ್ವಕ್ಕೆ ಆತಂಕ ಒಡ್ಡಿರುವ ಉತ್ತರ ಕೊರಿಯಾದ ರಹಸ್ಯ ಪ್ರಬಲ ಮಧ್ಯ ಗಾಮಿ ಪರೀಕ್ಷಾರ್ಥ ಕ್ಷಿಪಣಿ ಸ್ಪೋಟಗೊಂಡಿದೆ. ಮುಂದಿನ ವರ್ಷ ಸೇನೆಗೆ ಇದನ್ನು ಸೇರ್ಪಡೆ ಮಾಡಲು ಉದ್ದೇಶಿಸಲಾಗಿತ್ತು. ಈ ಕ್ಷಿಪಣಿ ಸ್ಫೋಟಗೊಳ್ಳುವುದರೊಂದಿಗೆ ಆ ದೇಶದಲ್ಲಿ ವಿಫಲಗೊಂಡ ಎರಡನೇ ಆತಂಕಕಾರಿ ಪ್ರಯೋಗ ಇದಾಗಿದೆ.
ಉತ್ತರ ಕೊರಿಯಾದ ಕಾಲಮಾನ ಬೆಳಿಗ್ಗೆ 6.30ರಲ್ಲಿ ಮಧ್ಯಂತರ ಶ್ರೇಣಿಯ ಮುಸುಡನ್ ಕ್ಷಿಪಣಿಯನ್ನು ಪ್ರಯೋಗಾರ್ಥವಾಗಿ ಹಾರಿಬಿಡಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಇದು ಭಾರೀ ಸ್ಫೋಟದೊಂದಿಗೆ ನೂಚ್ಚುನೂರಾಯಿತು ಎಂಬುದನ್ನು ದಕ್ಷಿಣ ಕೊರಿಯ ಮತ್ತು ಅಮೆರಿಕ ಸೇನೆ ಪತ್ತೆ ಮಾಡಿವೆ.

ಅಮೆರಿಕದ ಲಾಸ್ ವೆಗಾಸ್‍ನಲ್ಲಿ ಅಮೆರಿಕ ಅಧ್ಯಕ್ಷ ಹುದ್ದೆಗಾಗಿ ಪೈಪೋಟಿ ನಡೆಸಿರುವ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೊಮೊಕ್ರಾಟ್ ಪಕ್ಷದ ಹಿಲರಿ ಕ್ಲಿಂಟನ್ ನಡುವೆ ಮೂರನೇ ಮತ್ತು ಅಂತಿಮ ಸುತ್ತಿನ ಚರ್ಚೆ ಆರಂಭವಾಗುವುದಕ್ಕೆ ಕೆಲವು ನಿಮಿಷಗಳ ಮುನ್ನ ಉತ್ತರ ಕೊರಿಯಾದಲ್ಲಿ ಈ ರಹಸ್ಯ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಶ್ವೇತಭವನದ ಮುಂದಿನ ಉತ್ತರಾಧಿಕಾರಿಗೆ ಉತ್ತರ ಕೊರಿಯಾದ ಕ್ಷಿಪ್ರ ಅಣ್ವಸ್ತ್ರಗಳ ಕಾರ್ಯಕ್ರಮಗಳು ದೊಡ್ಡ ಸವಾಲಾಗಿವೆ ಎಂಬುದನ್ನು ಮತ್ತೊಮ್ಮೆ ಸಾರಿದಂತಾಗಿದೆ. ಒಂದು ತಿಂಗಳ ಹಿಂದೆ ಉತ್ತರಕೊರಿಯಾ ಅಣ್ವಸ್ತ್ರ ಪ್ರಯೋಗ ನಡೆಸಿ ಇಡೀ ವಿಶ್ವದಲ್ಲಿ ಆತಂಕ ಸೃಷ್ಟಿಸಿತ್ತು. ವಿಶ್ವಸಂಸ್ಥೆಯ ಭದ್ರತಾಮಂಡಳಿ ಪಯೊಂಗ್‍ಯಾಂಗ್‍ಗೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಹಠಮಾರಿ ರಾಷ್ಟ್ರ ಡೋಂಟ್ ಕೇರ್ ಪ್ರವೃತ್ತಿ ಅನುಸರಿಸುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin