ಉತ್ತರ ಕೊರಿಯಾ-ಮಲೇಷ್ಯಾ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣ

ಈ ಸುದ್ದಿಯನ್ನು ಶೇರ್ ಮಾಡಿ

North-Korea-01

ಕೌಲಾಲಂಪುರ್/ಪಯೊಂಗ್‍ಯಾಂಗ್, ಮಾ.7-ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಲ ಸಹೋದರ ಕಿಮ್ ಜಾಂಗ್ ನಮ್ ಹತ್ಯೆ ಪ್ರಕರಣ ದಿನಕ್ಕೊಂದು ಹೊಸ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ. ಉತ್ತರ ಕೊರಿಯಾ ಮತ್ತು ಮಲೇಷ್ಯಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಭುಗಿಲೆದ್ದಿರುವಾಗಲೇ ಎರಡೂ ರಾಷ್ಟ್ರಗಳು ಪರಸ್ಪರ ಪ್ರತೀಕಾರದ ಕ್ರಮಕ್ಕೆ ಮುಂದಾಗಿವೆ.   ತನ್ನ ದೇಶದಲ್ಲಿರುವ ಉತ್ತರ ಕೊರಿಯಾದ ರಾಜತಾಂತ್ರಿಕ ಸಿಬ್ಬಂದಿ ದೇಶಬಿಟ್ಟು ಹೋಗದಂತೆ ಮಲೇಷ್ಯಾ ನಿರ್ಬಂಧ ವಿಧಿಸಿದೆ. ಮಲೇಷ್ಯಾದ ಪ್ರಜೆಗಳು ಮತ್ತು ದೂತಾವಾಸ ಅಧಿಕಾರಿಗಳು ಉತ್ತರ ಕೊರಿಯಾದಿಂದ ತೆರಳಲು ಪಯೊಂಗ್‍ಯಾಂಗ್ ನಿಷೇಧಿಸಿರುವುದಕ್ಕೆ ಪ್ರತೀಕಾರವಾಗಿ ಕೌಲಾಲಂಪುರ್ ಈ ಕ್ರಮ ಕೈಗೊಂಡಿದೆ. ಈ ಎರಡೂ ದೇಶಗಳು ಪರಸ್ಪರ ತಮ್ಮ ನಿಲುವುಗಳಿಗೆ ಬದ್ಧವಾಗಿರುವುದರಿಂದ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin