ಉತ್ತರ ಪ್ರದೇಶದಲ್ಲಿ ಕುಟುಂಬದವರಿಂದಲೇ ಪ್ರೇಮಿಗಳಿಬ್ಬರ ಕಗ್ಗೊಲೆ
ಈ ಸುದ್ದಿಯನ್ನು ಶೇರ್ ಮಾಡಿ
ಮುಜಫರ್ನಗರ್, ಏ.16-ಯುವತಿ ಮತ್ತು ಆಕೆಯ ಪ್ರೇಮಿಯನ್ನು ಆಕೆಯ ಕುಟುಂಬದ ಸದಸ್ಯರೇ ಕಗ್ಗೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಫರ್ನಗರದ ಮನ್ಸೂರ್ಪುರ್ನಲ್ಲಿ ನಡೆದಿದೆ. ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಂಚಲ್ (18) ಎಂಬ ಯುವತಿ ಅರುಣ್ ಕುಮಾರ್ (19) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಇವರ ಪ್ರೇಮಕ್ಕೆ ಅಂಚಲ್ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದೇ ಕಾರಣಕ್ಕಾಗಿ ಯುವತಿ ಸಹೋದರ, ಆತನ ಸ್ನೇಹಿತ ಮತ್ತು ಇನ್ನೂ ಮೂವರು ಪ್ರೇಮಿಗಳ ಕತ್ತು ಹಿಸುಕಿ ಕೊಂದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments