ಉತ್ತರ ಪ್ರದೇಶದಲ್ಲಿ ಬಿಜೆಪಿಯತ್ತ ಮತದಾರರ ಒಲವು

ಈ ಸುದ್ದಿಯನ್ನು ಶೇರ್ ಮಾಡಿ

sdghfsdhfdhನವದೆಹಲಿ, ಆ.4- ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸತ್ವಪರೀಕ್ಷೆಯಾಗಿದೆ. ಸಮಾಜವಾದಿ ಪಕ್ಷ, ಬಿಎಸ್ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗÀಳು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿವೆ. ವಿಧಾನಸಭೆ ಚುನಾವಣೆಗೆ ಇನ್ನೂ ಕಾಲಾವಕಾಶವಿದ್ದರೂ ಇತ್ತೀಚಿನ ಸಮೀಕ್ಷೆಯ ಪ್ರಕಾರ ಅಖಿಲೇಶ್ ಯಾದವ್ ಸಿಎಂ ಹುದ್ದೆಗೆ ಜನರ ಮೊದಲ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ಏಕೈಕ ದೊಡ್ಡ ಪ?ವಾಗಿ ಹೊರಹೊಮ್ಮಿದೆ.  ಎಬಿಪಿ ನ್ಯೂಸ್ ಸಂಸ್ಥೆ ಜುಲೈ 24 ಮತ್ತು 25 ರಂದು 10 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 1ಸಾವಿರ ಜನರನ್ನು ಪ್ರಶ್ನಿಸಲಾಗಿದೆ.
ಸಿಎಂ ಅಖಿಲೇಶ್ ಯಾದವ್ ಉತ್ತಮ ಸಿಎಂ ಅಭ್ಯರ್ಥಿ ಎಂದು ಶೇ.28 ರಷ್ಟ ಮತಗಳಿಸಿದ್ದರೆ, ಮಾಯಾವತಿ ಶೇ.25 ರಷ್ಟು ಹಾಗೂ ಶೇ.17 ರಷ್ಟು ಜನರು ಯೋಗಿ ಆದಿತ್ಯನಾಥ್, ಕೇಶವ್ ಪ್ರಸಾದ್ ಮೌರ್ಯ ಶೇ.6 ರಷ್ಟು ಮತ್ತು ಶೀಲಾ ದೀಕ್ಷಿತ್ ಶೇ.5 ರಷ್ಟು ಮತಗಳಿಸಿದ್ದಾರೆ. ಏತನ್ಮಧ್ಯೆ, ಶೇ.32 ರಷ್ಟು ಜನರು ಮುಂಬರುವ ಚುನಾವಣೆಯಲ್ಲಿ ಜಯಗಳಿಸಿ ಬಿಜೆಪಿ ಸರಕಾರ ರಚಿಸಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.26 ರಷ್ಟು ಜನರು ಸಮಾಜವಾದಿ ಪಕ್ಷ ಶೇ.24 ರಷ್ಟು ಜನರು ಬಿಎಸ್ಪಿ, ಶೇ.7 ರಷ್ಟು ಜನರು ಕಾಂಗ್ರೆಸ್ ಹಾಗೂ ಶೇ.4 ರಷ್ಟು ಜನರ ಪ್ರಕಾರ ಸಮ್ಮಿಶ್ರ ಸರಕಾರ ರಚನೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಶೇ.7 ರಷ್ಟು ಜನರು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin