ಉತ್ತರ ಪ್ರದೇಶದಲ್ಲಿ ಮಂಗಗಳೊಂದಿಗೆ ವಾಸಿಸುತ್ತಿದ್ದ 8 ವರ್ಷದ ಬಾಲಕಿ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

8-Year-Girl

ಬೆಹರಾಚಿ (ಉತ್ತರ ಪ್ರದೇಶ),ಏ.6– ಕನ್ನಡದ ಆಫ್ರಿಕಾದಲ್ಲಿ ಶೀಲಾ, ಕಾಡಿನ ರಾಜ ಚಿತ್ರಗಳು ಸೇರಿದಂತೆ ಹಲವಾರು ಸಿನಿಮಾಗಳು ಮತ್ತು ಜಂಗಲ್‍ಬುಕ್‍ನಂತಹ ಕಾಮಿಕ್‍ಗಳಲ್ಲಿ ಮನುಷ್ಯರು ಪ್ರಾಣಿಗಳೊಂದಿಗೆ ವಾಸಿಸಿ ಅವುಗಳ ವರ್ತನೆಯನ್ನೇ ಅನುಕರಿಸುವುದನ್ನು ನೋಡಿದ್ದೀರಿ..! ಆದರೆ ಇಂತಹ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಬೆಹರಾಚಿಯಲ್ಲಿ 8 ವರ್ಷದ ಬಾಲಕಿಯೊಬ್ಬಳು ಮಂಗಗಳ ಗುಂಪಿನೊಂದಿಗೆ ವಾಸಿಸುವ ಮೂಲಕ ವಾಹನರ ವರ್ತನೆಯನ್ನೇ ಅನುಕರಿಸಿದ್ದಾಳೆ.

ಈಕೆಗೆ ಮಾತನಾಡಲು ಬರುವುದಿಲ್ಲ ಮತ್ತು ಏನಾದರೂ ತಿಂಡಿ ಕೊಟ್ಟರೆ ಕೈಯಲ್ಲಿ ತಿನ್ನದೆ ಮಂಗಗಳ ರೀತಿಯಲ್ಲಿ ಬಾಯಿಯಿಂದಲೇ ತಿನ್ನುವುದು ಮತ್ತು ಪ್ರಾಣಿಗಳ ರೀತಿಯಲ್ಲಿ ನಡೆಯುವುದನ್ನು ರೂಢಿ ಮಾಡಿಕೊಂಡಿದ್ದಾಳೆ.  ಈಕೆಯನ್ನು ಕಟರ್‍ನಿಯಾಘಾಟ್ ಪ್ರಾಣಿ ದಯಾ ಸಂಘದವರು ಹಾಗೂ ಸ್ಥಳೀಯ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸುರೇಶ್‍ಯಾದವ್‍ರ ಸಹಾಯದಿಂದ ಈಕೆಯನ್ನು ಮಂಗಗಳಿಂದ ತಪ್ಪಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯ ವೈದ್ಯರ ಪ್ರಕಾರ ಈಕೆಗೆ ಮಾತನಾಡಲು ಹಾಗೂ ಯಾವುದೇ ಭಾಷೆಯನ್ನು ಅರಿಯಲು ಮತ್ತು ಮಾನವರ ವರ್ತನೆಯನ್ನು ಅನುಕರಿಸಲು ಸಾಧ್ಯವಿಲ್ಲ. ಆದರೆ ಚಿಕಿತ್ಸೆಯಿಂದ ಈಕೆಯನ್ನು ಸಹಜ ಸ್ಥಿತಿಗೆ ತರಬಹುದು ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin