ಉತ್ತರ ಪ್ರದೇಶದ ನೂತನ ಸಿಎಂ ಆಗಿ ಯೋಗಿ ಆದಿತ್ಯನಾಥ್ ಆಯ್ಕೆ, ನಾಳೆ ಪ್ರಮಾಣ ವಚನ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Yogi--01

ಲಖನೌ. ಮಾ.18 : ಗೋರಖ್ ಪುರ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು,  ನಾಳೆ ಉತ್ತರ ಪ್ರದೇಶ 32 ನೇ  ಮುಖ್ಯಮಂತ್ರಿಯಾಗಿ  ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರ ಹೆಸರು ಸಿಎಂ ಸ್ಥಾನಕ್ಕೆ ಕೇಳಿ ಬಂದಿತ್ತು.  ಇಂದು ಲಖನೌನ ಲೋಕಭವನದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 2.15ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಯೋಗಿ ಆದಿತ್ಯನಾಥ್ ಅವರೊಂದಿಗೆ, ಕೇಶವ್ ಪ್ರಸಾದ್ ಮೌರ್ಯ ಪ್ರಕಾಶ್ ಪಂತ್, ಮದನ್ ಕೌಶಿಕ್, ಯಶ್ಪಾಲ್ ಆರ್ಯ, ಸುಬೋಧ್ ಉನಿಯಾಲ್, ರೇಖಾ ಆರ್ಯ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಬಿಎಸ್ಪಿ ಪದವಿಧರರಾಗಿರುವ ಯೋಗಿ ಆದಿತ್ಯನಾಥ್ ಅವರು 1998ರಿಂದ ಸತತ ಐದು ಬಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದು, ಈಗ ದೇಶದ ಅತಿ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಫೈರ್‍ ಬ್ರಾಂಡ್ ಎಂದೇ ಖ್ಯಾತರಾಗಿರುವ ಯೋಗಿ ಆದಿತ್ಯನಾಥ್ ಗೋರಖ್‍ಪುರ್ ಚುನಾವಣಾ ಕ್ಷೇತ್ರದಿಂದ 1998ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2002ರಲ್ಲಿ ಹಿಂದೂ ಯುವ ವಾಹಿನಿ ಎಂಬ ಸಂಘಟನೆಯನ್ನು ಸ್ಥಾಪಿಸಿದ ಯೋಗಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ರಕ್ಷಣೆಗಾಗಿ ಈ ಸಂಘಟನೆ ಕಾರ್ಯವೆಸಗುತ್ತದೆ ಎಂದಿದ್ದರು. ಗೋರಕ್ಷಣೆ, ಲವ್ ಜಿಹಾದ್ ಮೊದಲಾದ ವಿಷಯಗಳಲ್ಲಿ ಮಧ್ಯಪ್ರವೇಶಿಸಿ ಹೋರಾಡುವ ಈ ಸಂಘಟನೆ ಗೋರಖ್‍ಪುರ್, ಮೌ, ದಿಯೋರಿಯಾ, ಖುಷಿನಗರ್, ಮಹಾರಾಜ್‍ಗಂಜ್, ಬಸ್ತಿ, ಸಂತ್ ಕಬೀರ್ ನಗರ್ ಮತ್ತು ಸಿದ್ದಾರ್ಥ್ ನಗರ್‍‍ನಲ್ಲಿ ಪ್ರಭುತ್ವ ಹೊಂದಿದೆ.

ಅಜಯ್ ಸಿಂಗ್ ಬಿಷ್ತ್ ಎಂಬುದು ಯೋಗಿ ಅವರ ನಿಜನಾಮ. ಎಚ್‍ಎನ್‍ಬಿ ಗರ್ವಾಲ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಗಣಿತ ಪದವಿ.
ಪ್ರಚೋದನಾತ್ಮಕ ಮತ್ತು ತೀಕ್ಷ್ಣ ನುಡಿಯಿಂದಲೇ ಭಾಷಣ ಮಾಡುವುದಕ್ಕೆ ಯೋಗಿ ಜನಪ್ರಿಯರಾಗಿದ್ದಾರೆ.  2005ರಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರನ್ನು ‘ಶುದ್ದೀಕರಿಸುವ ಕಾರ್ಯಾಚರಣೆ’ ಮೂಲಕ ಹಿಂದೂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದರು ಎಂಬ ಆರೋಪವಿದೆ. ಆದರೆ ಅದು ಮತಾಂತರವಲ್ಲ, ಹಿಂದೂ ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವ ಘರ್‍‍ವಾಪಸಿ ಕೆಲಸ ಎಂದು ಯೋಗಿ ವಾದಿಸುತ್ತಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin