ಉತ್ತರ ಪ್ರದೇಶದ 2,000 ಮದರಸಾ, ಮಸೀದಿಗಳ ಮೇಲೆ ಹದ್ದಿನ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

madrassas

ಬಿಜ್ನೋರ್/ಮೀರತ್, ಏ.22-ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಸ್ಥಳೀಯ ಮಸೀದಿಯೊಂದರ ಇಮಾಮ್ ಸೇರಿದಂತೆ ಐವರು ಬಂಧನಕ್ಕೆ ಒಳಗಾದ ನಂತರ ಉತ್ತರ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಿಜ್ನೋರ್ ಮತ್ತು ಮೀರತ್ ನಗರಗಳಲ್ಲಿರುವ ಸುಮಾರು 2,000 ಮಸೀದಿಗಳು ಮತ್ತು ಮದರಸಾಗಳ ಚಟುವಟಿಕೆಗಳ ಮೇಲೆ ಹದ್ದಿನಕಣ್ಣಿನ ನಿಗಾ ಇಡಲಾಗಿದೆ.   ಐಎಸ್ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿತರಾದ ಯುವಕರು ತಾವು ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದಾಗಿ ತಿಳಿಸಿದ್ದರು. ಅಲ್ಲದೇ ಇವರೆಲ್ಲೂ ವಿವಿಧ ಮದರಸಾಗಳಲ್ಲಿ ಅಧ್ಯಯನ ಮಾಡಿದ್ದ ವಿದ್ಯಾರ್ಥಿಗಳು.ಈ ಹಿನ್ನೆಲೆಯಲ್ಲಿ ಮಸೀದಿಗಳು, ಮದರಸಾಗಳು ಮತ್ತು ಇತರ ಪ್ರಾರ್ಥನಾ ಮಂದಿರಗಳ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದು, ಅಗತ್ಯವಾದರೆ ತಪಾಸಣೆ ನಡೆಸಲು ಭದ್ರತಾಪಡೆಗಳು ಮುಂದಾಗಿವೆ.   ಬಿಜ್ನೋರ್ ಸೇರಿದಂತೆ ಉತ್ತರಪ್ರದೇಶದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳು ಮತ್ತು ಮಸೀದಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ಧಾರೆ. ಇದಕ್ಕಾಗಿ ಅಲ್ಪಸಂಖ್ಯಾತ ಇಲಾಖೆಯ ನೆರವು ಪಡೆಯಲಾಗಿದೆ.   ರಾಜ್ಯದ ವಿವಿಧೆಡೆ ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿ ಧಾರ್ಮಿಕ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುತ್ತಿದ್ದಾರೆ ಎಂದು ಬಿಜ್ನೋರ್‍ನ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಹಾನಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin