ಉತ್ತರ ಪ್ರದೇಶಲ್ಲಿ 50 ರೂ.150 ರೂ.ಗೆ ಮಾರಾಟವಾಗುತ್ತಿವೆ ರೇಪ್ ವಿಡಿಯೋಗಳು

ಈ ಸುದ್ದಿಯನ್ನು ಶೇರ್ ಮಾಡಿ

GSDGASFGಲಕ್ನೌ,ಆ.4- ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಇಂಥದ್ದೊಂದು ದಂಧೆಯನ್ನು ಕಾನೂನು ಸುವ್ಯಸ್ಥೆಯ ವೈಫಲ್ಯವೆನ್ನಬೇಕೋ ಅಥವಾ ಜನರ ನೀಚಾತಿನೀಚತನದ ಪರಮಾವಧಿ ಎನ್ನಬೇಕೋ ಸಾರ್ವಜನಿಕರೇ ತೀರ್ಮಾನಿಸಬೇಕು.  ಏನು ಆ ದಂಧೆ ಎನ್ನುತ್ತೀರಾ…? ಇಲ್ಲಿದೆ ನೋಡಿ, ಮಹಿಳೆಯರ ಮೇಲಿನ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಕೃತ್ಯಗಳನ್ನು ಚಿತ್ರೀಕರಿಸಿಕೊಂಡ ದುಷ್ಕರ್ಮಿಗಳು 50 ರೂ. 150 ರೂ. ಗರಿಷ್ಠ ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ.   30 ಸೆಕೆಂಡ್ 5 ನಿಮಿಷಗಳ ಚಿತ್ರೀಕರಣದ ವಿಡಿಯೋ ಭಾರೀ ಪ್ರಮಾಣದಲ್ಲಿ ಸೇಲಾಗುತ್ತಿದೆ. 30 ಸೆಕೆಂಡ್‍ಗಳವರೆಗಿನ ಚಿತ್ರ 50ರಿಂದ 150 ರೂ.ಗಳಾದರೆ 5 ನಿಮಿಷದ ಚಿತ್ರೀಕರಣ ವಿಡಿಯೋವನ್ನು ಬರೋಬ್ಬರಿ ಒಂದು ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.


ಈ ದಂಧೆ ನಡೆಸುವವರು ತಮ್ಮ ನಂಬಿಕಸ್ಥರಿಗೆ ಮಾತ್ರ ಈ ವಿಡಿಯೋ ಚಿತ್ರೀಕರಣಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೂ ಈ ನೀಚ ಕೃತ್ಯದ ದಂಧೆ ಸಾರ್ವಜನಿಕವಾಗಿ ಈಗಾಗಲೇ ಗಮನಸೆಳೆದಿದೆ.  ಇನ್ನೊಂದು ವಿಶೇಷವೆಂದರೆ ಸಂಬಂಧಪಟ್ಟ ಸ್ಥಳೀಯ ಪೊಲೀಸರಿಗೂ ಇದು ಗೊತ್ತಿದೆ ಎಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ನೈಜ ಲೈವ್ ಚಿತ್ರಗಳು ಹೀಗೆ ಮಾರಾಟವಾಗುತ್ತಿವೆ ಎಂದು ಆಗ್ರಾದ ಕಾಸ್‍ಗಂಜ್ ಮಾರ್ಕೆಟ್‍ನ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ಕೆಲ ವ್ಯಕ್ತಿಗಳು, ಒಮ್ಮೊಮ್ಮೆ ದುಷ್ಕರ್ಮಿಗಳು ಗುಂಪುಗಳೇ ಈ ಅಶ್ಲೀಲ ಮತ್ತು ಅಮಾನವೀಯ ವಿಡಿಯೋಗಳನ್ನು ಡೌನ್‍ಲೋಡ್ ಮಾಡುತ್ತಾರೆ ಎಂದೂ ಅವರು ತಿಳಿಸಿದ್ದಾರೆ. ಈ ದಂಧೆ ನಡೆಸುವವರಿಗೆ ತಾವು ಅತ್ಯಾಚಾರ ನಡೆಸಿದ ದೃಶ್ಯಗಳ ಚಿತ್ರೀಕರಣವನ್ನು ಸಾರಾಸಗಟಾಗಿ ಮಾರಾಟ ಮಾಡಿದರೆ ಅದನ್ನು ವ್ಯಕ್ತಿಗಳಿಗೆ ಮಾರಾಟ ಮಾಡುತ್ತಾರೆ.  ಒಂದು ಚಿತ್ರ ಅತ್ಯಂತ ಭಯಂಕರವಾಗಿದೆ. ಸುಮಾರು 20 ವರ್ಷದ ಯುವತಿಯ ಮೇಲೆ ದಾಳಿ ಮಾಡಿದ ಇಬ್ಬರು ಕಾಮುಕರು ಆಕೆಯ ಗೆಳೆಯನನ್ನು ಕಟ್ಟಿ ಹಾಕಿದ್ದಾರೆ.  ದಯವಿಟ್ಟು ನನ್ನನ್ನು ಕೈ ಬಿಡಿ ಎಂದು ಗೋಳಿಡುತ್ತಿದ್ದಾನೆ ಯುವಕ. ಹುಡುಗಿ ದಯವಿಟ್ಟು ಅತ್ಯಾಚಾರ ದೃಶ್ಯ ಚಿತ್ರೀಕರಿಸಿಕೊಳ್ಳಬೇಡಿ ಎಂದು ಅಂಗಲಾಚುತ್ತಿದ್ದಾಳೆ.  ಆರೋಪಿಗಳು ತಮ್ಮ ಮೊಬೈಲ್‍ಗಳಲ್ಲಿ ರೇಪ್ ದೃಶ್ಯ ಚಿತ್ರೀಕರಿಸಿಕೊಳ್ಳುತ್ತಾರೆ. ಆನಂತರ ಅದನ್ನು ಉಪಯೋಗಿಸಿಕೊಳ್ಳುತ್ತಾರೆ ಎಂದು ಪೊಲೀಸರೇ ಹೇಳುತ್ತಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin