ಉತ್ತರ ಪ್ರದೇಶ ಚುನಾವಣೆ : ಗೋಮಾಂಸ ರಫ್ತು ಮಾಡುವ ಶಾಸಕನಿಗೆ ಬಿಜೆಪಿ ಟಿಕೆಟ್
ಲಕ್ನೋ,ಜ.18-ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಆರಂಭದಲ್ಲೇ ಅಸಮಾಧಾನ ಸ್ಪೋಟಗೊಂಡಿದೆ. 2013ರ ಮುಜಾಫರ್ನಗರ್ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಸಕರಾದ ಸಂಗೀತ್ ಸೋಮ್ ಮತ್ತು ಸುರೇಶ್ ರಾಣಾ ಅವರಿಗೆ ಟಿಕೆಟ್ ನೀಡಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಅಸಮಾ ಧಾನ ಭುಗಿಲೆದ್ದಿದೆ. ಸಂಗೀತ್ ಸೋಮ್ ವಿರುದ್ಧ ಗೋ ಮಾಂಸ ರಫ್ತು ಮಾಡುವ ಆರೋಪವೂ ಇದೆ.
ಇವರಿಬ್ಬರಿಗೆ ಅನುಕ್ರಮವಾಗಿ ಸರ್ದಾನಾ ಮತ್ತು ಥಾನಾ ಭವನ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಇದರೊಂದಿಗೆ ಅನ್ಯ ಪಕ್ಷಗಳಿಂದ ವಲಸೆ ಬಂದಿರುವ 10 ಮಂದಿ ಶಾಸಕರು ಸೇರಿದಂತೆ 25 ಪಕ್ಷಾಂತರಿಗಳಿಗೆ ಟಿಕೆಟ್ ನೀಡಿರುವುದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾ ಧಾನಕ್ಕೆ ಕಾರಣವಾಗಿದೆ. ನ್ಯಾಯಮೂರ್ತಿ ವಿಷ್ಣು ಸಹಾಯ್ ಆಯೋಗವು ಸೋಮ್ ಮತ್ತು ರಾಣಾ ಅವರ ವಿರುದ್ದ ಮತೀಯ ಗಲಭೆ ಆರೋಪ ಹೊರಿಸಿತ್ತು. ಇಷ್ಟಾದರೂ ಕೂಡ ಇವರಿಗೆ ಟಿಕೆಟ್ ನೀಡಿರುವುದು ಪಕ್ಷದ ಒಂದು ಬಣ ತೀವ್ರ ಅತೃಪ್ತಿಗೊಂಡಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS