ಉತ್ತರ ವಿಭಾಗ ಪೊಲೀಸರ ಕಾರ್ಯಾಚರಣೆ : 17 ಮಂದಿ ಬಂಧನ, 82.05ಲಕ್ಷದ ಆಭರಣ, 13ಲಕ್ಷ ನಗದು ವಶ

ಈ ಸುದ್ದಿಯನ್ನು ಶೇರ್ ಮಾಡಿ

uttara

ಬೆಂಗಳೂರು, ನ.4- ನಗರದ ವಿವಿಧೆಡೆ ಹಗಲು ಮತ್ತು ರಾತ್ರಿ ವೇಳೆ ಕನ್ನಕಳವು, ದರೋಡೆ, ಡಕಾಯಿತಿ ನಡೆಸುತ್ತಿದ್ದ 17 ಮಂದಿ ಆರೋಪಿಗಳನ್ನು ಬೆಂಗಳೂರು ನಗರ ಉತ್ತರ ವಿಭಾಗದ ಪೊಲೀಸರು ಬಂಧಿಸಿ 82.05 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 13 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.ಆರೋಪಿಗಳಿಂದ 1690ಗ್ರಾಂ ಚಿನ್ನಾಭರಣ, 2.5ಕೆಜಿ ಬೆಳ್ಳಿ ವಸ್ತುಗಳು, ಒಂದು ಲ್ಯಾಪ್‍ಟಾಪ್, ಐದು ಮೊಬೈಲ್, 13.25 ಲಕ್ಷ ರೂ. ನಗದು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳ ಬಂಧನದಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 14 ಪ್ರಕರಣಗಳು ಪತ್ತೆಯಾದಂತಾಗಿವೆ.

ಯಶವಂತಪುರ ವ್ಯಾಪ್ತಿಯಲ್ಲಿ ನಡೆದಿದ್ದ 6 ಪ್ರಕರಣಗಳಲ್ಲಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರಾಜಗೋಪಾಲನಗರ ವ್ಯಾಪ್ತಿಯಲ್ಲಿನ 4 ಪ್ರಕರಣಗಳನ್ನು ಪತ್ತೆಹಚ್ಚಿ ಮೂವರನ್ನು ಬಂಧಿಸಲಾಗಿದೆ.ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರಕರಣಗಳನ್ನು ಪತ್ತೆಹಚ್ಚಿ ಮೂವರನ್ನು ಬಂಧಿಸಿರುವ ಪೊಲೀಸರು ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಪ್ರಕರಣ ಪತ್ತೆಹಚ್ಚಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

police theft

ಯಶವಂತಪುರ:

ಮುತ್ಯಾಲನಗರದಲ್ಲಿ ನ.7ರಂದು ಮನೆ ಬಾಗಿಲು ಒಡೆದು ಚಿನ್ನಾಭರಣ ದೋಚಿದ್ದ ಶಿಜು ಏಸುದಾಸ್ ಪಿ.ಡ್ಯಾನಿಯಲ್ ಎಂಬಾತನನ್ನು ಬಂಧಿಸಿ 15 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಅ.24ರಂದು ತುಮಕೂರು ರಸ್ತೆ, ಪೀಣ್ಯ ಮೆಟ್ರೋ ನಿಲ್ದಾಣದ ಬಳಿ ಕಂಪೆನಿಗಳಿಂದ ಹಣ ಸಂಗ್ರಹಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿ ಮಚ್ಚಿನಿಂದ ಬೆದರಿಸಿ ದರೋಡೆ ಮಾಡಿದ್ದ 6 ಮಂದಿಯನ್ನು ಬಂಧಿಸಿ 13.45 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಸೋಲದೇವನಹಳ್ಳಿ:

ಅಕ್ಟೋಬರ್ 27ರಂದು ಆಚಾರ್ಯ ಕಾಲೇಜು ಗಣಪತಿ ನಗರದಲ್ಲಿ ವಾಸವಿರುವ ವ್ಯಕ್ತಿಯೊಬ್ಬರಿಗೆ ಮಚ್ಚು ತೋರಿಸಿ ಹೆದರಿಸಿ ದರೋಡೆ ಮಾಡಿದ್ದ ಆರೋಪಿಗಳಾದ ಹನುಮಂತರಾಜು, ಸುಭಾಷ್ ಕೃಷ್ಣ , ನವೀನ್ ಮತ್ತು ಕರಿಯಪ್ಪ ಎಂಬುವರನ್ನು ಬಂಧಿಸಿ 2.20 ಲಕ್ಷ ಬೆಲೆ ಬಾಳುವ ಮೊಬೈಲ್, ಬೈಕ್, 5 ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಲ್ಲೇಶ್ವರಂ :

 ಜೆ.ಪಿ.ನಗರದ ಕೆಂಪಯ್ಯ ಬ್ಲಾಕ್‍ನಲ್ಲಿನ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ತಂಗಿಯ ಮನೆ ಕೀ ತೆಗೆದುಕೊಂಡು ಸಹಚರನಿಗೆ ನೀಡಿ ಚಿನ್ನಾಭರಣ ದೋಚಿದ್ದ ನದೀಮ್ ಅಹಮ್ಮದ್ ಮತ್ತು ತರನಂಭಾನು ಎಂಬುವರನ್ನು ಬಂಧಿಸಿ 8 ಲಕ್ಷ ಬೆಲೆಯ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

uttara1

ಮನೆ ಕೆಲಸದಾಕೆ ಬಂಧನ:
ಮಲ್ಲೇಶ್ವರಂನ 16ನೇ ಕ್ರಾಸ್ ನಿವಾಸಿಯೊಬ್ಬರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಫೂಲ್ ಎಂಬಾಕೆಯನ್ನು ಬಂಧಿಸಿ ಕದ್ದಿದ್ದ 2 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin