ಉತ್ತರ ಸಿರಿಯಾದಲ್ಲಿ ಟರ್ಕಿ ನಡೆಸಿದ ವಾಯುದಾಳಿಗೆ 88 ನಾಗರಿಕರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

88-Killed

ಬೈರುತ್, ಡಿ.24-ಉತ್ತರ ಸಿರಿಯಾ ಬಾಷೋನ್‍ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಡುವೆ ಟರ್ಕಿ ನಡೆಸಿದ 24 ತಾಸುಗಳ ವಿಮಾನ ದಾಳಿಯಲ್ಲಿ 88ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ರಕ್ಷಣಾ ಸಂಸ್ಥೆ ಹೇಳಿದೆ.  ಅಲ್-ಬಾಬ್‍ನಲ್ಲಿ ಗುರುವಾರದಿಂದ ಆರಂಭವಾದ ವೈಮಾನಿಕ ದಾಳಿ 24 ಗಂಟೆಗಳ ಕಾಲ ಮುಂದುವರೆಯಿತು. ಮೊದಲ ದಿನ ದಾಳಿಯಲ್ಲಿ 21 ಮಕ್ಕಳೂ ಸೇರಿದಂತೆ 72 ನಾಗರಿಕರು ಮೃತಪಟ್ಟರು. ಶುಕ್ರವಾರದ ಬಾಂಬ್ ಸುರಿಮಳೆಯಲ್ಲಿ 16 ಮಂದಿ ಹತರಾದರು, ಸಾವಿಗೀಡಾದವರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ರಹಮಿ ಅಬ್ದುಲ್ ರೆಹಮಾನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಿರಿಯಾದಲ್ಲಿ ಐಎಸ್ ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ನಾಗರಿಕರ ಮೇಲೆ ನಡೆದ ಘೋರ ಹಿಂಸಾಚಾರಗಳಲ್ಲಿ ಇದು ಒಂದೆಂದು ಅವರು ಟೀಕಿಸಿದ್ದಾರೆ.  ಸಮರ ಸಂತ್ರಸ್ತ ಸಿರಿಯಾದಲ್ಲಿ ಯುದ್ದ ಅಪರಾಧ ಪ್ರಕರಣಗಳ ಕುರಿತು ಸಾಕ್ಷ್ಯಾಧಾರ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸುವುದಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಸಮ್ಮತಿ ಸೂಚಿಸಿದ ಸಂದರ್ಭದಲ್ಲೇ ನಾಗರಿಕರು ಬಲಿಯಾಗಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin