ಉದ್ದೀಪನ ಮದ್ದು ಸೇವನೆ : 10 ಮಂದಿ ಅಥ್ಲಿಟ್‍ಗಳ ಪದಕಗಳು ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

medals

ಕ್ಯಾನ್‍ಟನ್ ಆಫ್ ವೋಡ್ (ಸ್ವಿಡ್ಜರ್‍ಲ್ಯಾಂಡ್) , ನ.18- 2008ರ ಬೀಜಿಂಗ್ ಒಲಿಂಪಿಕ್ಸ್‍ನಲ್ಲಿ ಉದ್ದೀಪನ ಮದ್ದು ಸೇವನೆಗೆ ಒಳಗಾಗಿದ್ದವರನ್ನು ವಿಚಾರಣೆ ಮಾಡಿದ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ( ಐಒಸಿ ) 16 ಮಂದಿ ಅಥ್ಲಿಟ್‍ಗಳ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ. ಇದರಲ್ಲಿ 10 ಮಂದಿ ಪದಕ ವಿಜೇತ ಅಥ್ಲಿಟ್‍ಗಳು ಸೇರಿದ್ದು ಅವರು ಗೆದ್ದ ಪದಕಗಳನ್ನು ರದ್ದು ಮಾಡಲಾಗಿದೆ. ಡೋಪಿಂಗ್ ಕೇಸ್‍ನಲ್ಲಿ ಸಿಕ್ಕಿಬಿದ್ದವರಲ್ಲಿ ಬಹುತೇಕ ವೈಟ್‍ಲಿಫ್ಟಿಂಗ್ , ಕುಸ್ತಿ ಹಾಗೂ ಅಥ್ಲಿಟ್‍ಗಳೇ ಹೆಚ್ಚಾಗಿದ್ದಾರೆ. ಇವರಲ್ಲಿ ಕುಸ್ತಿ ಪಟುಗಳಾದ ರಷ್ಯಾದ ಕುಶಾನ್ ಬಾರೋವಿ ಮತ್ತು ಅಜೆರ್ರಿ, ವಿಟಲೆ ರಹಿಮೋ , ಇರಾನ್ ದೇಶದ ವೇಟ್‍ಲಿಫ್ಟರ್ ಕಾಜಾ ಕೂಡ ಸೇರಿದ್ದಾರೆ. ಇವರೆಲ್ಲರೂ ಬೆಳ್ಳಿ ಪದಕಗಳನ್ನು ಜಯಿಸಿದ್ದರು.

ಇನ್ನು ವೇಟ್‍ಲಿಫ್ಟಿಂಗ್‍ನಲ್ಲಿ ಕಂಚಿನ ಪದಕ ಜಯಿಸಿದ್ದ ರಷ್ಯಾದ ಕಾದ್‍ಜಿಮುರತ್ ಅಕ್ಕಾವೈ (+94 ಕೆಜಿ), ಡಿಮ್‍ಟ್ರಿ ಲಾಪ್‍ಕೋವ್ (+105), ಉಕ್ರೇನಿನ ನತಾಲಯ ದಾವೇದೋವ (+69) , ಕಜಾಕ್‍ನ ಮಾರಿಯಾ ಗ್ರಾಬೊವಿಟ್‍ಸ್ಕಾಯಾ (+75) , ಕಜಾಕಿಸ್ತಾನದ ಕುಸ್ತಿ ಪಟು ಅಸೆಟ್ ಮಾಮ್‍ಬಿಟೋ , ಉಕ್ರೇನಿನ ಪೋಲೆ ವಾವುಲ್‍ಟರ್ ಮತ್ತು ಗ್ರೀಕ್‍ನ ಟ್ರಿಪ್ಪಲ್ ಜಪ್ಪರ್ ದಿವಿಟ್‍ಜಿ ಸೇರಿದ್ದಾರೆ. ಇನ್ನು ಉಳಿದಂತೆ ಅರ್ಹತೆ ಕಳೆದುಕೊಂಡ ವೈಟ್ ಲಿಫ್ಟರ್ ಮತ್ತು ಅಥ್ಲಿಟ್‍ಗಳನ್ನು ರಷ್ಯಾ, ಅಜಿರ್‍ಬಿಡ್‍ಜಾನ್, ಬಿಲಾರೂಸ್, ಉಕ್ರೇನ್ ಮತ್ತು ಕಜಾಕಿಸ್ತಾನದವರೆಂದು ಗುರುತಿಸಲಾಗಿದೆ.  2008 ಮತ್ತು 2012ರ ಡೋಪಿಂಗ್ ಟೆಸ್ಟ್‍ಗಾಗಿ 1243 ಸ್ಯಾಂಪಲ್‍ಗಳನ್ನು ಪರಿಶೀಲಿಸಿರುವ ಐಒಸಿ ಕಮಿಟಿಯು ಈಗ 2016ರ ರಿಯೊ ಒಲಿಂಪಿಕ್ಸ್‍ನತ್ತಲೂ ಕಣ್ಣು ಹಾಯಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin