ಉದ್ಯೋಗದ ಕೊರತೆ ನಿರುದ್ಯೋಗಕ್ಕಿಂತ ಗಂಭೀರ ಸಮಸ್ಯೆ : ನೀತಿ ಆಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Neeti-Ayog

ನವದೆಹಲಿ, ಮೇ 28-ಉದ್ಯೋಗದ ತೀವ್ರ ಕೊರತೆ ಅಥವಾ ಅಪೂರ್ಣ ಉದ್ಯೋಗವು ನಿರುದ್ಯೋಗಕ್ಕಿಂತಲೂ ಗಂಭೀರ ಸಮಸ್ಯೆ ಎಂದು ಕೇಂದ್ರ ಸರ್ಕಾರದ ನೀತಿಗಳನ್ನು ರೂಪಿಸಲು ಸಲಹೆ ಮಾಡುವ ನೀತಿ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಒಬ್ಬ ವ್ಯಕ್ತಿ ಮಾಡಬೇಕಾದ ಕೆಲಸವನ್ನು ಇಬ್ಬರು ಅಥವಾ ಮೂವರು ನಿರ್ವಹಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ನಿರುದ್ಯೋಗಕ್ಕಿಂತಲೂ ದೊಡ್ಡ ಸಮಸ್ಯೆ ಎಂದು ಚಿಂತಕರ ಚಾವಡಿ ಎಂದೇ ಪರಿಗಣಿಸಲ್ಪಟ್ಟಿರುವ ಈ ಆಯೋಗ ಹೇಳಿದೆ.


ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಉದ್ಯೋಗಗಳನ್ನು ಸಮರ್ಪಕವಾಗಿ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪಗಳ ನಡುವೆ ನೀತಿ ಆಯೋಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ.   2017-18 ರಿಂದ 2019-20ರ ಅವಧಿಗಾಗಿ ಮೂರು ವರ್ಷಗಳ ಕ್ರಿಯಾ ಯೋಜನೆ ಕಾರ್ಯಸೂಚಿಯಲ್ಲಿ ಆಯೋಗ ಈ ಅಂಶವನ್ನು ತಿಳಿಸಿದ್ದು, ಅಧಿಕ ಉತ್ಪಾದಕತೆ ಮತ್ತು ಅಧಿಕ ವೇತನದ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin