ಉದ್ಯೋಗಾವಕಾಶ : ಕೆ.ಎಸ್.ಆರ್.ಪಿಯಲ್ಲಿ 849 ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

 Police--02

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ  ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ ಟೇಬಲ್ (ಪುರುಷ) ಕೆ.ಎಸ್.ಆರ್.ಪಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 849
ಹುದ್ದೆಗಳ ವಿವರ :
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ) – 834 ಹುದ್ದೆಗಳು
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ ಟೇಬಲ್ ಸ್ಥಳೀಯ (ಹೈ-ಕ) (ಕೆ.ಎಸ್.ಆರ್.ಪಿ) (ಪುರುಷ) – 15 ಹುದ್ದೆಗಳು

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ / 10ನೇ ತರಗತಿ / ಇದಕ್ಕೆ ಸಮನಾದ ಶಿಕ್ಷಣವನ್ನು ಪಡೆದಿರಬೇಕು.
ಅರ್ಹತೆ : ಒಂದಕ್ಕಿಂತ ಹೆಚ್ಚು ಜೀವಂತ ಪತ್ನಿ ಹೊಂದಿರುವ ಪುರುಷ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿ ಇಲ್ಲದೇ ನೇಮಕಾತಿಗೆ ಅರ್ಹರಾಗಿರುವುದಿಲ್ಲ.

ವಯೋಮಿತಿ : ಕನಿಷ್ಠ 18 ವರ್ಷ ವಯಸ್ಸು ನಿಗದಿ ಮಾಡಿದ್ದು, ಗರಿಷ್ಠ ವಯಸ್ಸುನ್ನು ಪ.ಜಾ, ಪಪಂ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 27 ವರ್ಷ, ಇತರೆ ಅಭ್ಯರ್ಥಿಗಳಿಗೆ 25 ವರ್ಷ ಹಾಗೂ ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ನಿಗದಿಗೊಳಿಸಲಾಗಿದೆ. ಸೈನಿಕರಿಗೂ ವಿಶೇಷ ವಿನಾಯಿತಿ ಇದ್ದು ಇಲಾಖೆಯ ನಿಭಂದನೆಗಳಿಗೆ ಒಳಪಟ್ಟಿರುತ್ತದೆ.

ಆಯ್ಕೆ ವಿಧಾನ : ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢತೆ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರೀಯೆ ನಡೆಯಲಿದೆ.
ಶುಲ್ಕ : ಸಾಮಾನ್ಯ, ಪ್ರವರ್ಗ 2(ಎ), 2(ಬಿ), 3(ಎ) 3(ಬಿ) ವರ್ಗದವರಿಗೆ  250 ರೂ.ಗಳು. ಹಾಗೂ ಪ.ಜಾ, ಪಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 100 ರೂ ನಿಗದಿ ಪಡಿಸಲಾಗಿದೆ. ಶುಲ್ಕವನ್ನು ಎಸ್ ಬಿ ಐ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿಯಲ್ಲಿ ಚಲನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 08-12-2017
ಶುಲ್ಕ ಪಾವತಿಸಲು ಕೊನೆಯ ದಿನಾಂಕ  : 12-12-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.ksp.gov.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ

Facebook Comments

Sri Raghav

Admin