ಉಪಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಪತನ : ಕುಮಾರ ಬಂಗಾರಪ್ಪ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Kumar-Bangarapp

ನಂಜನಗೂಡು, ಮಾ.28-ಉಪಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ಕುಮಾರ ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ  ಅವಧಿ ಪೂರೈಸುವುದು ಅನುಮಾನ. ಆದಷ್ಟು ಬೇಗ ಪತನಗೊಳ್ಳುವ ಮುನ್ಸೂಚನೆ ಇದೆ. ಕಾಂಗ್ರೆಸ್ ಪಕ್ಷಕ್ಕೂ ಮತ್ತು ಸರ್ಕಾರಕ್ಕೂ ಸಾಮ್ಯತೆಯೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಹೋಬಳಿಗೊಬ್ಬ ಸಚಿವರನ್ನು ನೇಮಿಸಿ ಚುನಾವಣೆ ನಡೆಸಲು ಸರ್ಕಾರ ಹುನ್ನಾರ ಮಾಡಿದೆ. ಅಧಿಕಾರವಿದೆ ಎಂದು ಏನೂ ಬೇಕಾದರೂ ಮಾಡುತ್ತೇವೆ ಎಂಬ ಧೋರಣೆ ಇವರದಾಗಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.   ಕಾಂಗ್ರೆಸ್‍ನಲ್ಲಿ ಹಿರಿಯರನ್ನೆಲ್ಲಾ ಮೂಲೆಗುಂಪು ಮಾಡಲಾಗಿದೆ. ಎಸ್.ಎಂ.ಕೃಷ್ಣರಂತಹ ಹಿರಿಯರು, ನಮ್ಮಂತಹ ಕಿರಿಯರೆಲ್ಲಾ ಬಿಜೆಪಿ ಕಡೆ ಆಕರ್ಷಿತರಾಗಿದ್ದೇವೆ. ಕೇಂದ್ರ ಸರ್ಕಾರ ಭ್ರಷ್ಟಚಾರ ಕಿತ್ತೊಗೆಯಲು ಶತಪ್ರಯತ್ನ ಮಾಡುತ್ತಿದೆ. ಏ.9ರ ತನಕ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin