ಉಪಚುನಾವಣೆ ಸೋಲು : ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದ ಬಿಎಸ್‍ವೈಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

YADIYURAPPA

ಬೆಂಗಳೂರು, ಏ.13- ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಉಪಸಮರದ ಅಖಾಡಕ್ಕೆ ಧುಮುಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಪಕ್ಷದ ಸೋಲು ಭಾರೀ ಮರ್ಮಾಘಾತ ಉಂಟುಮಾಡಿದೆ.   ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ನಾನೇ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತೊಡೆತಟ್ಟಿ ಅಖಾಡಕ್ಕಿಳಿದಿದ್ದ ಯಡಿಯೂರಪ್ಪನವರಿಗೆ ಉಭಯ ಕ್ಷೇತ್ರಗಳಲ್ಲಿ ಸೋಲುಂಟಾಗಿರುವುದು ಅವರ ನಾಯಕತ್ವದ ವಿರುದ್ದ ಪಕ್ಷದಲ್ಲಿ ಅಪಸ್ವರ ಉಂಟಾಗುವುದು ಬಹುತೇಕ ಖಚಿತ.

ಏಕೆಂದರೆ ವೀರಶೈವ ಸಮುದಾಯದ ಪ್ರಶ್ನಾತೀತ ನಾಯಕನೆಂದೇ ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಎಸ್‍ವೈ ನಂಜನಗೂಡು ಮತ್ತು ಗುಂಡುಪ್ಲೇಟೆಯಲ್ಲಿ ತಮ್ಮ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.   2018ರ ವಿಧಾನಸಭೆ ಚುನಾವಣೆಗೆ ಬಿಜೆಪಿ ವರಿಷ್ಠರು ಬಿಎಸ್‍ವೈ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಈ ಎರಡು ಉಪಚುನಾವಣೆಯನ್ನು ಗೆಲ್ಲುವ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ಕನಸು ಯಡಿಯೂರಪ್ಪನವರದ್ದಾಗಿತ್ತು.

ಆದರೆ ನಿರ್ಣಾಯಕ ಮಹಾಸಮರದಲ್ಲಿ ಎರಡೂ ಕ್ಷೇತ್ರಗಳಲ್ಲಿ ಪಕ್ಷ ಸೋತಿರುವುದು ಬಿಎಸ್‍ವೈಗೆ ಭಾರೀ ಮುಖಭಂಗ ಉಂಟು ಮಾಡಿದೆ. ಪಕ್ಷದಲ್ಲಿ ತಾವೇ ಮುಖ್ಯ ತಮ್ಮ ಮಾತೇ ಅಂತಿಮ ಎಂಬುದನ್ನು ಸಾಬೀತು ಮಾಡಲು ಹೊರಟಿದ್ದ ಅವರಿಗೆ ಇನ್ನು ಮುಂದೆ ಎಲ್ಲದಕ್ಕೂ ಕಡಿವಾಣ ಬೀಳುವುದು ಗ್ಯಾರಂಟಿ.
ಟಿಕೆಟ್ ಹಂಚಿಕೆ, ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಕೋರ್ ಕಮಿಟಿಯಲ್ಲಿ ಚರ್ಚಿಸಿ ನಿರ್ಧರಿಸಬೇಕಾಗುತ್ತದೆ.  ಪದಾಧಿಕಾರಿಗಳ ನೇಮಕದ ನಂತರ ಪಕ್ಷದಲ್ಲಿ ಉಂಟಾಗಿದ್ದ ಭಿನ್ನಮತ ಮತ್ತೆ ಸ್ಫೋಟಗೊಳ್ಳುವ ಲಕ್ಷಣಗಳಿವೆ. ಕೇಂದ್ರ ವರಿಷ್ಠರ ಮಧ್ಯಪ್ರವೇಶದಿಂದ ತೇಪೆ ಹಚ್ಚಿದ್ದ ಭಿನ್ನಮತ ಕೆಲವೇ ದಿನಗಳಲ್ಲಿ ಸ್ಫೋಟಗೊಂಡರೂ ಅಚ್ಚರಿ ಇಲ್ಲ. ಇನ್ನು ಬಿಎಸ್‍ವೈ ವಿರುದ್ಧ 2ನೇ ಹಂತದ ನಾಯಕರು ಸಿಡಿದೇಳುವುದು ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin