ಉಪನ್ಯಾಸಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ : ಮೌಲ್ಯಮಾಪನ ಬಹಿಷ್ಕರಿಸಿದರೆ 5 ವರ್ಷ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

Evaluation--01

ಬೆಂಗಳೂರು,ಫೆ.16-ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಗಟ್ಟಲು ಬಿಗಿ ಕ್ರಮ ಕೈಗೊಂಡಿದ್ದ ರಾಜ್ಯ ಸರ್ಕಾರ ಇದೀಗ ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಮೌಲ್ಯಮಾಪನ ಸಮಯದಲ್ಲಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪನ್ಯಾಸಕರು ಬಹಿಷ್ಕಾರ, ಪ್ರತಿಭಟನೆ ನಡೆಸಿದರೆ ಅಂಥವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ಮೂರು ವರ್ಷ ಕಾರಾಗೃಹ ಶಿಕ್ಷೆಯಾಗಲಿದೆ.   ಈ ಸಂಬಂಧ ಮುಂದಿನ ತಿಂಗಳು ಮಂಡನೆಯಾಗಲಿರುವ 2017-18ನೇ ಸಾಲಿನ ರಾಜ್ಯ ಬಜೆಟ್ ವೇಳೆ 1983ರ ಕರ್ನಾಟಕ ಶಿಕ್ಷಣ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ.

ನೂತನ ತಿದ್ದುಪಡಿಯಂತೆ ಮೌಲ್ಯಮಾಪನದ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಪ್ರತಿಭಟನೆ ಇಲ್ಲವೇ ಬಹಿಷ್ಕಾರಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.   ಮುಂದಿನ ಬಜೆಟ್‍ನಲ್ಲಿ ನೂತನ ಕಾಯ್ದೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ವಿಧಾನಮಂಡಲದ ಉಭಯ ಸದನಗಳಾದ ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಮಂಡಿಸಲಿದ್ದಾರೆ.   ಚರ್ಚೆಗೊಳಪಟ್ಟ ನಂತರ ಕಾಯ್ದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ಬಳಿಕ ಇದು ಜಾರಿಗೆ ಬರಲಿದೆ.
ಇತ್ತೀಚೆಗೆ ಮುಕ್ತಾಯವಾದ ಜಂಟಿ ಅಧಿವೇಶನದ ವೇಳೆ ರಾಜ್ಯ ಸರ್ಕಾರ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ನೂತನ ಕಾಯ್ದೆಯನ್ನು ಜಾರಿ ಮಾಡಿತ್ತು. ಈ ಕಾಯ್ದೆ ಪ್ರಕಾರ ಇನ್ನು ಮುಂದೆ ಯಾವುದೇ ವ್ಯಕ್ತಿ, ವಿದ್ಯಾರ್ಥಿ, ಶಿಕ್ಷಣ ಸಂಸ್ಥೆಗಳು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದರೆ ಕಠಿಣ ಕ್ರಮ ಜರುಗಿಸಲು ಅವಕಾಶವಿತ್ತು.

1983ರ ಕರ್ನಾಟಕ ಶಿಕ್ಷಣ ಅಧಿನಿಯಮ ಪ್ರಕಾರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದರೆ ಅಂತಹ ವ್ಯಕ್ತಿಗೆ 5 ಲಕ್ಷ ದಂಡ, ಮೂರು ವರ್ಷ ಜೈಲು ಶಿಕ್ಷೆ , ವಿದ್ಯಾರ್ಥಿಗಳು ನಕಲು ಮಾಡುವುದು, ಇಲ್ಲವೇ ಸೋರಿಕೆಯಲ್ಲಿ ಸಿಕ್ಕಿಬಿದ್ದರೆ ಮೂರು ವರ್ಷ ಡಿಬಾರ್ ಮಾಡುವುದು ಜೊತೆಗೆ ಯಾವುದೇ ಶಿಕ್ಷಣ ಸಂಸ್ಥೆ ಈ ಪ್ರಕರಣದಲ್ಲಿ ಭಾಗಿಯಾದರೆ ಅನುದಾನವನ್ನೇ ರದ್ದುಪಡಿಸುವಂತಹ ಕಠಿಣ ಕ್ರಮವನ್ನು ಜಾರಿ ಮಾಡಿತ್ತು.   ಇದರ ಜೊತೆಗೆ ಉಪನ್ಯಾಸಕರ ಮೇಲೂ ಸರ್ಕಾರ ಬ್ರಹ್ಮಾಸ್ತ್ರವನ್ನು ಬಿಟ್ಟಿದೆ. ಪ್ರತಿ ವರ್ಷ ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೌಲ್ಯಮಾಪನ ಬಹಿಷ್ಕಾರ ಮಾಡುವಂತಹ ಸಂಗತಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದವು.

ಕಳೆದ ವರ್ಷ ಮೌಲ್ಯಮಾಪನ ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗದೆ ಪೋ ಷಕರು ಕೂಡ ಆತಂಕಗೊಂಡಿದ್ದರು. ಮೌಲ್ಯಮಾಪನಕ್ಕೆ ನೀಡುವ ಭತ್ಯೆ ಹೆಚ್ಚಳ ಸೇರಿದಂತೆ ವಿಶೇಷ ಸವಲತ್ತುಗಳನ್ನು ನೀಡಬೇಕೆಂದು ಮೌಲ್ಯಮಾಪನವನ್ನು ಬಹಿಷ್ಕರಿಸಿ ಸ್ವತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ್ದರು.   ಇದರಿಂದಾಗಿ ರಾಜ್ಯ ಸರ್ಕಾರವೂ ಮುಜುಗರಕ್ಕೆ ಸಿಲುಕಿತ್ತು. ಶಿಕ್ಷಣ ಸಚಿವರು ನಡೆಸಿದ ಸಂಧಾನಕ್ಕೆ ಶಿಕ್ಷಕರು ಬಗ್ಗಿರಲಿಲ್ಲ. ಕೊನೆಗೆ ಬೇಡಿಕೆಗಳನ್ನು ಈಡೇರಿಸುವ ಆಸ್ವಾಸನೆ ಸಿಕ್ಕ ನಂತರವೇ ಮೌಲ್ಯಮಾಪನ ಆರಂಭವಾಗಿತ್ತು.  ಹೀಗೆ ವರ್ಷದಿಂದ ವರ್ಷ ಉಪನ್ಯಾಸಕರು ಮತ್ತು ಶಿಕ್ಷಕರು ಸರ್ಕಾರವನ್ನು ಬ್ಲಾಕ್‍ಮೇಲ್ ಮಾಡುವ ಹಂತ ತಲುಪಿರುವುದರಿಂದ ರಾಜ್ಯ ಸರ್ಕಾರ ಬಹಿಷ್ಕರಿಸುವವರಿಗೆ ಬರೆ ಎಳೆಯಲು ಮುಂದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin