ಉಪ್ಪಿ ನೋಂದಣಿ ಮಾಡುವ ಹೊಸ ಪಕ್ಷದ ಹೆಸರೇನು ಗೊತ್ತೇ..?
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ, ಏ.25-ಖ್ಯಾತ ಚಿತ್ರನಟ ಉಪೇಂದ್ರ ಹೊಸ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ಉತ್ತಮ ಪ್ರಜಾಕೀಯ ಪಾರ್ಟಿ (ಯುಪಿಪಿ) ಎಂಬ ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗದಲ್ಲಿ ಪಕ್ಷದ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಈ ಕುರಿತು ಟ್ವೀಟರ್ನಲ್ಲಿ ಮಾಹಿತಿ ನೀಡಿರುವ ಉಪ್ಪಿ, ದೆಹಲಿಯ ಕೇಂದ್ರ ಚುನಾವಣಾ ಆಯೋಗದಲ್ಲಿ ತಮ್ಮ ಹೊಸ ಪಕ್ಷದ ಹೆಸರನ್ನು ನೋಂದಣಿ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ(ಕೆಪಿಜೆಪಿ)ಯಿಂದ ಹೊರಬಂದ ನಂತರ ಹೊಸ ಪಕ್ಷದ ಸ್ಥಾಪನೆಯಲ್ಲಿ ತೊಡಗಿದ್ದ ಅವರು, ಯುಪಿಪಿ ಹೆಸರಿನಲ್ಲಿ ಹೊಸ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದು, ಮತ್ತೊಂದು ಪ್ರಾದೇಶಿಕ ಪಕ್ಷ ರಾಜ್ಯ ರಾಜಕಾರಣಕ್ಕೆ ಸೇರ್ಪಡೆಯಾದಂತಾಗಿದೆ. ಪ್ರಜಾಕೀಯ ನಿಂತಿಲ್ಲ, ಶೀಘ್ರವೇ ಹೊಸ ಪಕ್ಷ ಕಟ್ಟುವುದಾಗಿ ಉಪೇಂದ್ರ ಮಾಧ್ಯಮಕ್ಕೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದರು.
Facebook Comments