ಉಪ ಚುನಾವಣೆ ನಾಮಪತ್ರಕ್ಕೆ ಜಯಲಲಿತಾ ಹೆಬ್ಬೆಟ್ಟಿನ ಸಹಿ ಹಾಕಿದ ಜಯಲಲಿತಾ

ಈ ಸುದ್ದಿಯನ್ನು ಶೇರ್ ಮಾಡಿ

Jayalalitha-b

ಚೆನ್ನೈ, ಅ.29-ತೀವ್ರ ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಉಪಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಯ ಬಿ ಫಾರಂಗೆ ಹೆಬ್ಬೆಟ್ಟಿನ ಗುರುತು ಹಾಕಿ ಅಂಗೀಕರಿಸಿದ್ದಾರೆ.ತಮಿಳುನಾಡಿನ ತಿರುಪ್ಪರನ್‍ಕುಂದ್ರಮ್ ವಿಧಾನಸಭಾ ಕ್ಷೇತ್ರಕ್ಕೆ ನ.9 ರಂದು ಉಪಚುನಾವಣೆ ನಡೆಯಲಿದ್ದು, ಎಐಎಡಿಎಂಕೆಯಿಂದ ಎ.ಕೆ.ಬೋಸ್‍ರನ್ನು ಕಣಕ್ಕಿಳಿಸಲಾಗುತ್ತಿದೆ. ಪಕ್ಷದ ವರಿಷ್ಠರಾಗಿರುವ ಜಯಲಲಿತಾ ಅವರು ಬಿ ಫಾರಂಗೆ ಸಹಿ ಹಾಕಬೇಕಿತ್ತು. ಆದರೆ ಅನಾರೋಗ್ಯದಿಂದ ಅವರು ಸಹಿ ಮಾಡುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಹೆಬ್ಬೆಟ್ಟಿನ ಸಹಿ ಪಡೆಯಲಾಗಿದೆ.

ಅವರ ಹೆಬ್ಬೆಟ್ಟಿನ ಸಹಿಯನ್ನು ಮದ್ರಾಸ್ ಮೆಡಿಕಲ್ ಕಾಲೇಜಿನ ಪ್ರೊ .ಬಾಲಾಜಿ ಖಚಿತಪಡಿಸಿದ್ದಾರೆ. ಜಯಲಲಿತಾ ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿ ರುವುದರಿಂದ ಸಹಿ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಎದುರಿಗೆ ಅವರ ಹೆಬ್ಬೆಟ್ಟು ಸಹಿಯನ್ನು ನಾಮಪತ್ರಕ್ಕೆ ಹಾಕಿಸಲಾಗಿದೆ ಎಂದು ಬಾಲಾಜಿ ಅವರು ಲಿಖಿತವಾಗಿ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದನ್ನು ಆಯೋಗ ಅಂಗೀಕರಿಸಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಕೆಲವರು ಜಯಲಲಿತಾ ಅವರ ಸಹಿಯನ್ನು ನಕಲಿ ಮಾಡಿ ಹಲವಾರು ದಾಖಲೆಗಳನ್ನು ಸಿದ್ಧಪಡಿಸಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಂಸದೆ ಶಶಿಕಲಾ ಪುಷ್ಪ ಅವರು ಯಾರಾದರೂ ಜಯಲಲಿತಾ ಅವರು ಸಹಿಯನ್ನು ನಕಲು ಮಾಡಿದರೆ ಶಿಕ್ಷೆಗೆ ಗುರಿಪಡಿಸುವುದಾಗಿ ಎಚ್ಚರಿಸಿದ್ದರು. ಈ ನಡುವೆ ಉಪಚುನಾವಣೆಗೆ ಸಹಿ ಅನಿವಾರ್ಯವಾಗಿರುವುದರಿಂದ ಹೆಬ್ಬೆಟ್ಟು ಗುರುತನ್ನು ಪಡೆಯಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin