ಉರಿ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯೋಧ ಸಾವು : ಹುತಾತ್ಮರ ಸಂಖ್ಯೆ 19 ಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Nayak Raj Kishior Singh

ಜಮ್ಮು , ಸೆ.30 : ಜಮ್ಮು-ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆ ಮೇಲೆ ಪಾಕಿಸ್ಥಾನದ ಜೈಶ್-ಎ-ಮೊಹಮ್ಮದ್ ಉಗ್ರ ಗಾಮಿಗಳು ನಡೆಸಿ ದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೋರ್ವ ಯೋಧ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಹುತಾತ್ಮರಾಗಿದ್ದಾನೆ. ಇದರಿಂಗಾಗಿ ಹುತಾತ್ಮರ ಸಂಖ್ಯೆ 19 ಕ್ಕೇರಿದೆ.
ಕಳೆದ 5 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಯಕ್ ರಾಜ್ ಕಿಶೋರ್ ಸಿಂಗ್ ಎನ್ನುವ ಯೋಧ ಹುತಾತ್ಮರಾದವರು ಎಂದು ತಿಳಿದು ಬಂದಿದೆ. ಉರಿ ಪಟ್ಟಣದಲ್ಲಿರುವ ಸೇನಾ ಕೇಂದ್ರ ಕಚೇರಿಯ ಶಿಬಿರದಲ್ಲಿ ಮಲಗಿದ್ದ ಯೋಧರ ಮೇಲೆ ಸೆಪ್ಟಂಬರ್ 18 ರ ರವಿವಾರ ನಸುಕಿನ ಜಾವ 4 ಗಂಟೆಗೆ ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಿ ಬರೋಬ್ಬರಿ 17 ಸೈನಿಕರನ್ನು ಕೊಂದಿದ್ದರು. ಇದರ ಬೆನ್ನಲ್ಲೇ ಸುದೀರ್ಘ ಆರು ತಾಸು ಕಾರ್ಯಾಚರಣೆ ನಡೆಸಿ ದಾಳಿಕೋರ 4 ಭಯೋತ್ಪಾದಕರನ್ನು ಸಂಹಾರಗೈಯಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin