ಉರುಳಿದ ಆಟೋ : ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಫೆ.7- ವೇಗವಾಗಿ ಹೋಗುತ್ತಿದ್ದ ಆಟೋವೊಂದು ಹುರುಳಿಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟು ನಾಲ್ವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಂಬಳ್ಳಿ ಗ್ರಾಮದಲ್ಲಿ ಜರುಗಿದೆ. ಕೊಳ್ಳೇಗಾಲ ತಾಲ್ಲೂಕು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಗ್ರಾಮದ ವಾಸಿ ಬಸವರಾಜು ಎಂಬುವರ ಮಗನಾದ ಪ್ರಸಾದ್‍ಕುಮಾರ್ (21) ಮೃತಪಟ್ಟ ದುರ್ದೈವಿ.ಪ್ರಸಾದ್ ಕುಮಾರ್ ಟಿ.ನರಸೀಪುರ ತಾಲ್ಲೂಕು ಹರಳಹಳ್ಳಿ ಗ್ರಾಮದ ತನ್ನ ಅಕ್ಕನ ಮನೆಗೆ ಹಬ್ಬದ ಊಟಕ್ಕೆ ತನ್ನ ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದು , ಊಟ ಮುಗಿಸಿಕೊಂಡು ಸಂಜೆ 5 ಸಮಯದಲ್ಲಿ ಈ ಯುವಕರ ತಂಡ ಆಟೋದಲ್ಲಿ ವಾಪಸ್ಸು ಬರುತ್ತಿದ್ದಾಗ ಉಲ್ಲಂಬಳ್ಳಿ ಗ್ರಾಮದ ಬಳಿ ಚಾಲಕನ ಅತಿ ವೇಗದಿಂದ ನಿಯಂತ್ರಣ ತಪ್ಪಿದ ಆಟೋ ರಸ್ತೆಬದಿಗೆ ಪಲ್ಟಿ ಹೊಡೆದು ಈ ಘಟನೆ ಸಂಭವಿಸಿದೆ.ಈ ಅಪಘಾತದಲ್ಲಿ ಪ್ರಸಾದ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು , ಆಟೋದಲ್ಲಿದ್ದ ರಾಜು, ಮಂಜು, ಮನೋಜ್‍ಕುಮಾರ್, ಪ್ರದೀಪ್‍ಕುಮಾರ್ ಅವರುಗಳು ತೀವ್ರವಾಗಿ ಗಾಯಗೊಂಡಿದ್ದು ಇವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಕವಾಡಿ ಪೊಲೀಸರು ಆಟೋ ಚಾಲಕ ದೀಪು ಎಂಬಾತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin