ಉಲ್ಟಾ ಹೊಡೆದ ಅಮೆರಿಕ : ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಲು ನಮ್ಮ ಬೆಂಬಲ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

john-KIbryb

ವಾಷಿಂಗ್ಟನ್, ಅ.7-ಪಾಕಿಸ್ತಾನವನ್ನು ಒಂದು ಭಯೋತ್ಪಾದಕ ದೇಶ ಎಂಬ ಘೋಷಣೆಗೆ ತಾನು ಬೆಂಬಲ ನೀಡುವುದಿಲ್ಲ ಎಂದು ಯು-ಟರ್ನ್ ಆಗಿರುವ ಅಮೆರಿಕ, ಭಾರತಕ್ಕೆ ಆತಂಕವೊಡ್ಡುತ್ತಿರುವ ಭಯೋತ್ಪಾದಕರ ಸ್ವರ್ಗವನ್ನು ನಿರ್ಮೂಲನೆ ಮಾಡಲು ಆ ಪ್ರಾಂತ್ಯದ ಸರ್ಕಾರಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸುವುದಾಗಿ ತಿಳಿಸಿದೆ.
ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ತಲೆದೋರಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನ ನಡುವೆ ಅರ್ಥಪೂರ್ಣ ಮಾತುಕತೆಯಾಗಬೇಕು ಹಾಗೂ ಇತ್ತೀಚೆಗೆ ಭುಗಿಲೆದ್ದಿರುವ ಉದ್ವಿಗ್ನತೆ ಉಪಶಮನಗೊಳ್ಳಬೇಕು ಎಂದು ಸಹ ಅಮೆರಿಕ ಕರೆ ನೀಡಿದೆ.

ವಾಷಿಂಗ್ಟನ್‍ನಲ್ಲಿ ಪ್ರತಿದಿನದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವಕ್ತಾರ ಜಾನ್ ಕಿರ್ಬಿ, ಮಾರಕ ಅಣ್ವಸ್ತ್ರಗಳು ಭಯೋತ್ಪಾದಕರ ಕೈಸೇರದಂತೆ ಪಾಕಿಸ್ತಾನ ಎಚ್ಚರ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಪಾಕಿಸ್ತಾನವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದೇಶವೆಂದು ಘೋಷಿಸುವ ಕಾಂಗ್ರೆಸ್ ಮಸೂದೆ ಮತ್ತು ಆನ್‍ಲೈನ್ ಅರ್ಜಿಗೆ ಅಮೆರಿಕ ಬೆಂಬಲ ನೀಡಲಿದೆಯೇ ಎಂಬ ಪ್ರಶ್ನೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಯಾವುದೇ ವಿಶೇಷ ಕಂಡುಬಂದಿಲ್ಲ ಹಾಗೂ ಇಂಥ ಒಂದು ವಿಧೇಯಕಕ್ಕೆ ನಾನು ಬೆಂಬಲ ನೀಡುವುದಿಲ್ಲ ಎಂದು ಅವರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin