ಉಳ್ಳಾಲದಲ್ಲಿ ಮುಂದುವರಿದ ಅಲೆಗಳ ಆರ್ಭಟ

ಈ ಸುದ್ದಿಯನ್ನು ಶೇರ್ ಮಾಡಿ

Ullal--03
ಉಳ್ಳಾಲ, ಡಿ.3- ಒಖಿ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಪ್ರಕ್ಷುಬ್ಧಗೊಂಡಿದ್ದ ಕಡಲಿನ ಉಬ್ಬರದ ಅರ್ಭಟ ಇಂದು ಕೂಡ ಮುಂದುವರಿದಿದೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವೆಡೆ ರಕ್ಷಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.  ನಿನ್ನೆ ರಾತ್ರಿ ಸುಮಾರು 8 ಗಂಟೆಯಿಂದ ಸಾಗರ ಪ್ರಕ್ಷುಬ್ಧಗೊಂಡು ದೊಡ್ಡ ಗಾತ್ರದ ಅಲೆಗಳು ಕಡಲ ತೀರದ ಪ್ರದೇಶಗಳಿಗೆ ಅಪ್ಪಳಿಸಿತ್ತು. ಆಲೆಗಳ ಭಾರೀ ಆರ್ಭಟದಿಂದ ಉಳ್ಳಾಲ, ಸೋಮೇಶ್ವರ, ಕೈಕೋ, ಕಿಲೆರಿಯಾ, ಉಚ್ಚಿಲ್, ಮುಕ್ಕಚ್ಚೇರಿ, ಸುಭಾಷ್‍ನಗರ, ಮೊಗವೀರಪಟ್ಟಣ ಮೊದಲಾದ ಸಮುದ್ರತೀರ ಪ್ರದೇಶಗಳ ಮನೆಗಳಿಗೆ ಅಪ್ಪಳಿಸಿ ಆತಂಕ ಉಂಟು ಮಾಡಿತ್ತು. ಕೆಲವು ನಿವಾಸಿಗಳು ಸುನಾಮಿ ಅಪ್ಪಳಿಸುವ ಭೀತಿಗೆ ಒಳಗಾಗಿದ್ದರು.

Facebook Comments

Sri Raghav

Admin