ಉಸೈನ್ ಬೋಲ್ಟ್ ಹ್ಯಾಟ್ರಿಕ್ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

Bolt

ರಿಯೋ ಡಿ ಜನೈರೋ,ಆ.15– ಜಮೈಕಾದ ದಂತಕಥೆ ಉಸೈನ್ ಬೋಲ್ಡ್ ಒಲಂಪಿಕ್ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 100 ಮೀಟರ್ ಓಟದಲ್ಲಿ ಸತತ ಮೂರನೇ ಬಾರಿ ಬಂಗಾರದ ಪದಕ ಗೆಲ್ಲುವ ಮೂಲಕ ಈ ಅಥ್ಲೀಟ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಜಗತ್ತಿನ ಯಾವೊಬ್ಬ ಅಥ್ಲೀಟ್ ಮಾಡದೇ ಇರುವ ಮಹತ್ಸಾಧನೆಯ ಚಾರಿತ್ರಿಕ ದಾಖಲೆ ಬರೆದಿದ್ದಾರೆ.  ರಿಯೋ ಡಿ ಜನೈರೋದಲ್ಲಿ ಇಂದು ಮುಂಜಾನೆ ನಡೆದ 100 ಮೀಟರ್ ರನ್ನಿಂಗ್ ರೇಸ್‍ನಲ್ಲಿ 29 ವರ್ಷದ ಈ ಅಪ್ರತಿಮ ಅಥ್ಲೀಟ್ 9.81 ಸೆಕೆಂಡ್‍ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟುವ ಮೂಲಕ ಚಿನ್ನದ ಕಿರುನಗೆ ಬೀರಿದರು.  ಫೈನಲ್‍ನಲ್ಲಿ ತಮಗೆ ಪ್ರಬಲ ಸ್ಪರ್ಧಿಯಾಗಿದ್ದ ಅಮೆರಿಕಾದ ಮಾದಕ ವಸ್ತು ಕಳಂಕಿತ ಜಸ್ಟಿನ್ ಗಾಟ್ಲಿನ್ ಅವರನ್ನು ಎರಡನೇ ಸ್ಥಾನಕ್ಕೆ ಹಿಂದಿಕ್ಕುವಲ್ಲಿ ಬೋಲ್ಡ್ ಸಫಲರಾದರು. ಜಸ್ಟಿನ್ ಬೆಳ್ಳಿ ಪದಕಕ್ಕೆ ಸಮಾಧಾನ ಹೊಂದಿದರು. ಕೆನಡಾದ ಅಂಡ್ರೆ ಡೆ ಗ್ರಸ್ಸೆ ಕಂಚು ಪದಕ ಗಳಿಸಿದರು.  ಆಧುನಿಕ ಒಲಿಂಪಿಕ್ ಕ್ರೀಡಾಕೂಟದ 120 ವರ್ಷಗಳ ಇತಿಹಾಸದಲ್ಲಿ ಈ ಸಾಧನೆಗೈದ ವಿಶ್ವದ ಏಕಮಾತ್ರ ಕ್ರೀಡಾಪಟು ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin