ಉ.ಕೊರಿಯಾ ಕ್ಷಿಪಣಿ ಉಡಾವಣೆಗೆ ವಿಶ್ವಸಂಸ್ಥೆ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

North-korea

ವಾಷಿಂಗ್ಟನ್,ಮಾ.8-ಉತ್ತರ ಕೊರಿಯಾ ಇತ್ತೀಚೆಗೆ ನಿಷೇಧಿತ ಕ್ಷಿಪಣಿಗಳನ್ನು ಉಡಾಯಿಸಿರುವ ಕ್ರಮವನ್ನು ಕಟುವಾಗಿ ಖಂಡಿಸಿರುವ ವಿಶ್ವಸಂಸ್ಥೆ , ಆ ರಾಷ್ಟ್ರವು ಇಂತಹ ಕೃತ್ಯಗಳಿಂದ ಈ ಪ್ರಾಂತ್ಯದಲ್ಲಿ ಅಸ್ಥಿರತೆ ಉಂಟು ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಉತ್ತರ ಕೊರಿಯಾ ಉಡಾಸಿರುವ 4 ಕ್ಷಿಪಣಿಗಳ ಬಗ್ಗೆ ಚರ್ಚಿಸುವ ಸಲುವಾಗಿ ಸಂಯುಕ್ತ ರಾಷ್ಟ್ರಗಳು ಹಾಗೂ ಜಪಾನ್ ರಾಷ್ಟ್ರಗಳ ಮನವಿ ಮೇರೆಗೆ ಇಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯು ಈ ಕೃತ್ಯವನ್ನು ಖಂಡಿಸಿದೆ. ಕಳೆದ ಸೋಮವಾರ ಉತ್ತರ ಕೊರಿಯಾ ಉಡಾಯಿಸಿದ ಮೂರು ಕ್ಷಿಪಣಿಗಳು ಜಪಾನ್ ಪ್ರಾಂತ್ಯದ ಸಮೀಪ ನೀರಿನಲ್ಲಿ ಬಂದಿಳಿದಿತ್ತು. ಇದರಿಂದ ಈ ಪ್ರಾಂತ್ಯದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಜಪಾನ್ ಅಸಮಾಧಾನ ವ್ಯಕ್ತಪಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin