ಊಟದಲ್ಲಿ ಖಾರ ಹೆಚ್ಚಾಗಿದ್ದಕ್ಕೆ ಮೊದಲ ಪತ್ನಿಯ ತಲೆ ಕಡಿದ ಪತಿರಾಯ..!

ಈ ಸುದ್ದಿಯನ್ನು ಶೇರ್ ಮಾಡಿ

Wife-Head

ನವದೆಹಲಿ, ಫೆ.16-ಊಟದಲ್ಲಿ ಖಾರ ಹೆಚ್ಚಾಗಿದ್ದಕ್ಕೆ ಕುಪಿತಗೊಂಡ ಪತಿಯೊಬ್ಬ ತನ್ನ ಮೊದಲ ಪತ್ನಿಯ ಶಿರಚ್ಛೇದ ಮಾಡಿದ ಭೀಭತ್ಸ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಪೂರ್ವ ದೆಹಲಿಯ ಮಧು ವಿಹಾರ್ ಪ್ರದೇಶದ ಕಾರ್ಪೆಂಟರ್ ಸುಬೋಧ್(40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಈತ ತನ್ನ ಮೊದಲ ಪತ್ನಿ ಮೋನಿಶಾಳ ತಲೆ ಕಡಿದು ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ, ರುಂಡವನ್ನು ಹಾಸಿಗೆ ಪೆಟ್ಟಿಗೆ (ಬೆಡ್ ಬಾಕ್ಸ್) ಚೀಲದಲ್ಲಿ ತುರುಕಿ ಇಟ್ಟದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ :
ಸುಭೋದ್ ಕೆಲವು ತಿಂಗಳ ಹಿಂದೆ ಮುನಿಯಾ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದ. ಈ ವಿಷಯ ಮೊದಲ ಪತ್ನಿ ಮೋನಿಶಾಗೆ ತಿಳಿದು ಅಗಾಗ ಜಗಳವಾಗುತ್ತಿತ್ತು. ಈತನಿಂದ ಬೇರ್ಪಟ್ಟಿದ್ದ ಮೋನಿಶಾ ದೆಹಲಿಯ ರೋಹಿಣಿ ಪ್ರದೇಶದ ತನ್ನ ಸಂಬಂಧಿ ಮನೆಯಲ್ಲಿ ನೆಲೆಸಿದ್ದಳು.   ಆಕೆಯನ್ನು ಕೊಲ್ಲುವ ಉದ್ದೇಶದಿಂದ ಫೆ.10ರಂದು ಮೋನಿಶಾಳನ್ನು ಸಂಧಾನದ ಸೋಗಿನಲ್ಲಿ ಮಧು ವಿಹಾರ್ ಪ್ರದೇಶಕ್ಕೆ ಸುಬೋಧ್ ಕರೆಸಿಕೊಂಡಿದ್ದ. ಮೋನಿಶಾ ಮನೆಗೆ ಬಂದಾಗ ಪತಿಯೊಂದಿಗೆ ಎರಡನೇ ಪತ್ನಿ ಮುನಿಯಾ ಕೂಡ ಅಲ್ಲಿದ್ದಳು. ಇದರಿಂದ ಕುಪಿಳಾದ ಆಕೆ ಆತನೊಂದಿಗೆ ಜಗಳವಾಡಿದಳು.

ಆಕೆಯನ್ನು ಪ್ರತ್ಯೇಕವಾಗಿರಿಸುವುದಾಗಿ ಹೇಳಿ ಪುಸಲಾಯಿಸಿದ್ದ. ಮರುದಿನ ಅಂದರೆ ಫೆ.11ರ ರಾತ್ರಿ ಮೋನಿಶಾ ಸುಬೋಧ್‍ಗೆ ಊಟ ಬಡಿಸಿದಾಗ, ಆಹಾರ ವಿಪರೀತ ಖಾರ ಎಂದು ರೊಚ್ಚಿಗೆದ್ದ ಆತ ಮೊದಲ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಗರಗಸದಿಂದ ತಲೆ ತರಿದು, ತುಂಡು ತುಂಡಾಗಿ ಕತ್ತರಿಸಿದ್ದ.   ಗಂಡ-ಹೆಂಡತಿ ಜಗಳವಾದ ನಂತರ ಮೋನಿಶಾ ಕಾಣೆಯಾಗಿದ್ದರಿಂದ ಅಕ್ಕಪಕ್ಕದವರು ಗುಮಾನಿ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇಡೀ ಭೀಕರ ಘಟನೆ ಬೆಳಕಿಗೆ ಬಂದಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin