ಎಂಇಎಸ್‍ ಪುಂಡರಿಗೆ ಲಗಾಮು ಹಾಕಿ : ವಾಟಾಳ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Vatal-01

ಬೆಂಗಳೂರು, ನ.4- ಬೆಳಗಾವಿಯಲ್ಲಿ ಪದೇ ಪದೇ ಪುಂಡಾಟಿಕೆ ನಡೆಸುವ ಮೂಲಕ ಕನ್ನಡಿಗರ ಸ್ವಾಭಿಮಾನ ಮತ್ತು ಭಾವನೆಗೆ ಧಕ್ಕೆ ತರುತ್ತಿರುವ ಎಂಇಎಸ್‍ಗೆ ಕಡಿವಾಣ ಹೇರಬೇಕು ಎಂದು ಮಾಜಿ ಶಾಸಕ ಹಾಗೂ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿರುವ ಎಂಇಎಸ್ ಸದಸ್ಯರನ್ನು ಸದಸ್ಯತ್ವದಿಂದ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.  ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆ ಮಾಡುವ ಉದ್ಧಟತನವನ್ನು ಎಂಇಎಸ್‍ನವರು ಬೆಳಗಾವಿಯಲ್ಲಿ ತೋರಿದ್ದಾರೆ. ಇದರಲ್ಲಿ ಮೇಯರ್, ಉಪಮೇಯರ್ ಭಾಗಿಯಾಗಿ ಕನ್ನಡ ನಾಡಿಗೆ ಅವಮಾನ ಮಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯನ್ನು ಕೂಡಲೇ ಸೂಪರ್‍ಸೀಡ್ ಮಾಡಿ ಮೇಯರ್, ಉಪಮೇಯರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ ಎಂದು ಟೀಕಿಸಿದರು.  ನಿರಂತರವಾಗಿ ಇದೇ ಕಿಡಿಗೇಡಿ ಕೃತ್ಯವನ್ನು ಎಂಇಎಸ್ ಸಂಘಟನೆ ಮಾಡುತ್ತ ಬಂದಿದೆ. ಪ್ರತಿ ಬಾರಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಂತಹ ಕೃತ್ಯ ನಡೆಸುವ ಮೂಲಕ ಕಳಂಕ ತರುವ ಕೆಲಸವನ್ನು ಮಾಡುವ ಎಂಇಎಸ್‍ಅನ್ನು ಮಟ್ಟ ಹಾಕಬೇಕೆಂದು ವಾಟಾಳ್ ಒತ್ತಾಯಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin