ಎಂಇಎಸ್ ಕ್ಯಾತೆ ಮುಂದುವರೆಸಿದರೆ ಒಟ್ಟಾಗಿ ಹೋರಾಟ : ಕನ್ನಡಪರ ಸಂಘಟನೆಗಳ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

MES--0

ಬೆಳಗಾವಿ, ಮೇ 23- ಕರ್ನಾಟಕದಲ್ಲಿದ್ದು ಕೊಂಡು ಮಹಾರಾಷ್ಟ್ರಕ್ಕೆ ಜೈಎನ್ನುವುದು ಸರಿಯಲ್ಲ. ಇದೇ ಕ್ಯಾತೆ ಮುಂದುವರಿದರೆ ಕನ್ನಡಿಗರಿಗೆಲ್ಲರೂ ಒಟ್ಟಾಗಿ ಹೋರಾಟ ಮಾಡುವ ಕಾಲ ಬರುತ್ತದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಎಂಇಎಸ್ ಮುಖಂಡರ ಹೇಳಿಕೆಗೆ ಭಾರಿ ತಿರುಗೇಟು ನೀಡಿದ್ದಾರೆ.
ನಾವು ಮಹಾರಾಷ್ಟ್ರದವರು. ನಮ್ಮ ರಕ್ತ ಹರಿದರೂ ಚಿಂತೆ ಯಿಲ್ಲ. ಜೈ ಮಹಾರಾಷ್ಟ್ರ ಎಂದು ಹೇಳುತ್ತೇವೆ ಎಂದು ಎಂಇಎಸ್ ನಾಯಕರು ಉದ್ದಟತನದ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆರಳಿಸಿ ರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ರಾಘವೇಂದ್ರ ಜೋಶಿ, ಅಶೋಕ್ ಚಂದರಗಿ, ಮಾಜಿ ಮೇಯರ್ ಸಿದ್ದನಗೌಡ ಪಾಟೀಲ್ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.ಪಾಲಿಕೆಯಲ್ಲಿ ನಾಡ ವಿರೋಧಿ ಚಟುವಟಿಕೆ ನಡೆಸಿದರೆ ಸದಸ್ಯತ್ವ ರದ್ದು ಮಾಡುವುದಾಗಿ ಹಾಗೂ ಈ ಬಗ್ಗೆ ಕಾನೂನು ಜಾರಿಗೊಳಿಸಲಾಗುವುದು ಎಂಬ ಸಚಿವರ ಹೇಳಿಕೆಗೆ ಎಂಇಎಸ್‍ನ ಮಾಜಿ ಮೇಯರ್ ಸರಿತಾ ಪಾಟೀಲ ಮತ್ತು ಜಿಪಂ ಸದಸ್ಯೆ ಸರಸ್ವತಿ ಅವರು ಹೇಳಿಕೆ ನೀಡಿರುವುದಕ್ಕೆ ಎಲ್ಲೆಡೆ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್‍ನವರ ಕ್ಯಾತೆ ಮುಂದುವರಿದಿದ್ದು ಇತ್ತೀಚೆಗೆ ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ಎಂಇಎಸ್ ಮುಖಂಡರು ತೋರಿದ ಅಸಭ್ಯ ವರ್ತನೆ ಹಾಗೂ ಜಿಲ್ಲಾಧಿಕಾರಿಗೆ ಮರಾಠಿಯಲ್ಲಿ ಮಾತನಾಡಿ ಎಂದು ಹೇಳಿರುವುದು ಕನ್ನಡಿಗರನ್ನು ಇನ್ನಷ್ಟು ಕೆರಳಿಸುವಂತೆ ಮಾಡಿದೆ. ಜೈ ಮಹಾರಾಷ್ಟ್ರ ಎಂದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ನಮ್ಮ ಸದಸ್ಯತ್ವ ರದ್ದು ಮಾಡಿದರೂ ಚಿಂತೆಯಿಲ್ಲ. ನಾವು ಮತ್ತು ನಮ್ಮ ನಿಷ್ಠೆ ಮಹಾರಾಷ್ಟ್ರಕ್ಕೆ ಎಂದು ಜನಪ್ರತಿನಿಧಿಗಳು ಹೇಳಿಕೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin