ಎಂಇಎಸ್ ಚುನಾಯಿತ ಪ್ರತಿನಿಧಿಗಳಿಂದ ನಾಡವಿರೋಧಿ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Sarita-Patil--01

ಬೆಳಗಾವಿ, ಮೇ 23-ಎಂಇಎಸ್ ಚುನಾಯಿತ ಪ್ರತಿನಿಧಿಗಳು ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸಿದ್ದಾರೆ. ಮಾಜಿ ಮೇಯರ್ ಸರಿತಾ ಪಟೇಲ್ ಮತ್ತು ಜಿ.ಪಂ.ಸದಸ್ಯೆ ಸರಸ್ವತಿ ಅವರು ನಾಡವಿರೋಧಿ ಹೇಳಿಕೆ ನೀಡುವ ಮೂಲಕ ನಾಡದ್ರೋಹವೆಸಗಿದ್ದಾರೆ. ಈ ವಿರುದ್ಧ ಹಲವೆಡೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.  ನಾಡವಿರೋಧಿ ಚಟುವಟಿಕೆ ನಡೆಸುವ ಚುನಾಯಿತ ಪ್ರತಿನಿಧಿಗಳ ಸದಸ್ಯತ್ವ ರದ್ದು ಮಾಡುವುದಾಗಿ ನಿನ್ನೆ ನಗರಾಭಿವೃದ್ಧಿ ಸಚಿವ ರೋಷನ್‍ಬೇಗ್ ಹೇ ಳಿಕೆ ನೀಡಿದ ಬೆನ್ನಲ್ಲೇ ಎಂಇಎಸ್ ಚುನಾಯಿತ ಪ್ರತಿನಿಧಿಗಳು ತಮ್ಮ ಉದ್ಧಟತನವನ್ನು ಪ್ರದರ್ಶಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.ರಾಜ್ಯ ಸರ್ಕಾರ ಸದಸ್ಯತ್ವ ರದ್ದು ಮಾಡಿದರೂ ನಾವು ಜೈ ಮಹಾರಾಷ್ಟ್ರ ಎಂದು ಹೇಳುತ್ತೇವೆ. ನಾವು ಮಹಾರಾಷ್ಟ್ರದವರು. ನಮ್ಮ ರಕ್ತ ಹರಿದರೂ ಚಿಂತೆಯಿಲ್ಲ. ಜೈ ಮಹಾರಾಷ್ಟ್ರ ಎಂದು ಎಂಇಎಸ್‍ನ ಪುಂಡರು ಕೂಗಿದ್ದಾರೆ.  ನಾಡದ್ರೋಹಿಗಳು ಜೈ ಮಹಾರಾಷ್ಟ್ರ ಎಂದು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾಲಿಕೆಯಲ್ಲಿ ನಾಡವಿರೋಧಿ ಚಟುವಟಿಕೆ ನಡೆಸಿದರೆ ಸದಸ್ಯತ್ವ ರದ್ದು ಮಾಡುವುದಾಗಿ ರೋಷನ್ ಬೇಗ್ ಹೇಳಿದ್ದರು. ಇದಕ್ಕಾಗಿ ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸಲು ಮುಂದಾಗಿತ್ತು. ಇದ್ಯಾವುದನ್ನು ನಾವು ಕೇರ್ ಮಾಡುವುದಿಲ್ಲ ಎಂದು ಎಂಇಎಸ್‍ನವರು ನೀಡಿರುವ ಹೇಳಿಕೆ ನಾಡವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಇಲ್ಲಿನ ಕನ್ನಡಪರ ಸಂಘಟನೆಗಳು, ನಾಗರಿಕ ಸಂಘಟನೆಗಳು ಪ್ರತಿಭಟನೆಗಿಳಿದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin