ಎಂಟರ ಘಟ್ಟಕ್ಕೆ ಬಾಕ್ಸರ್ ವಿಕಾಸ್ ಕೃಷ್ಣನ್

ಈ ಸುದ್ದಿಯನ್ನು ಶೇರ್ ಮಾಡಿ

Vikasರಿಯೋಡಿ-ಜನೈರೋ, ಆ.13- ಭಾರತದ ಭರವಸೆಯ ಬಾಕ್ಸರ್ ಆಗಿ ಕಣದಲ್ಲಿ ಉಳಿದಿರುವ ವಿಕಾಸ್ ಕೃಷ್ಣನ್ ರಿಯೋ ಒಲಿಂಪಿಕ್ಸ್‍ನ ಪುರುಷರ 75 ಕೆಜಿ ಮಿಡ್ಲ್‍ವೇಟ್ ಬಾಕ್ಸಿಂಗ್‍ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.  ಇಲ್ಲಿ ನಿನ್ನೆ ರಾತ್ರಿ ನಡೆದ 7ನೆ ದಿನದ ಕ್ರೀಡಾಕೂಟದಲ್ಲಿ 24 ವರ್ಷದ ವಿಕಾಸ್, ಟರ್ಕಿಯ ಬಲಿಷ್ಠ ಬಾಕ್ಸರ್ ಸೈಪಲ್ ಆಂಡೆರ್ ಅವರನ್ನು 3-0 ಅಂತರದಿಂದ ಮಣಿಸಿ ಎಂಟರ ಘಟ್ಟ ತಲುಪಿದರು.  ರಿಯೋ ಸೆಂಟರ್‍ನ ಪೆವಿಲಿಯನ್-6ನಲ್ಲಿ ನಡೆದ ಸೆಣಸಾಟದಲ್ಲಿ ಆರಂಭದ ಸುತ್ತಿನಿಂದಲೂ ಬಲವಾದ ಪಂಚ್‍ಗಳನ್ನು
ನೀಡಿ ಟರ್ಕಿಯ ಬಾಕ್ಸರ್‍ನನ್ನು ವಿಕಾಸ್ ತಬ್ಬಿಬ್ಬುಗೊಳಿಸಿದರು. ಎರಡು ಮತ್ತು ಮೂರನೆ ಸುತ್ತುಗಳಲ್ಲೂ ಪಾರಮ್ಯ ಮೆರೆದ ವಿಕಾಸ್ ಗೆಲುವಿನ ಮುಗುಳ್ನಗೆ ಬೀರಿದರು. ಈ ವಿಭಾಗದ ಬಾಕ್ಸಿಂಗ್‍ನಲ್ಲಿ ವಿಕಾಸ್ ಭಾರತಕ್ಕೆ ಪದಕ ಗೆದ್ದುಕೊಡುವ ಪಟುವಾಗಿ ಹೊರಹೊಮ್ಮಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin