ಎಂಟು ಪ್ರಕರಣಗಳನ್ನು ಭೇದಿಸಿ ಪೊಲೀಸರು, ಮೂವರ  ಖತರ್ನಾಕ್ ಕಳ್ಳರ ಬಂಧನ 

ಈ ಸುದ್ದಿಯನ್ನು ಶೇರ್ ಮಾಡಿ

chitradurga

ಚಿತ್ರದುರ್ಗ, ಫೆ.28- ನಗರದ ವಿವಿಧೆಡೆ ಕಳವು ಸೇರಿದಂತೆ ಎಂಟು ಪ್ರಕರಣಗಳನ್ನು ಭೇದಿಸಿರುವ ಕೋಟೆ ಮತ್ತು ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ನಾಲ್ಕು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನಗರದ ಹೊರಪೇಟೆ ನಿವಾಸಿ ಅಲ್ತಾಫ್, ಸೈಯದ್ಸಾಯಿಲ್ ಮತ್ತು ಭುವನ್ ಬಂಧಿತ ಆರೋಪಿಗಳು.ಬಂಧಿತರಿಂದ 11 ಮೊಬೈಲ್,ಬೈಕ್, ನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಹಿಂದೆ ದೊಡ್ಡ ಗ್ಯಾಂಗ್ ಇದ್ದು, ಇದರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ಲಕ್ಷ್ಮಣ್ ನಿಂಬರಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗೋಪಾಲಪುರ ರಸ್ತೆ ಫ್ಲಿಪ್‍ಕಾರ್ಟ್ ಕೊರಿಯರ್ ಅಂಗಡಿಯಲ್ಲಿ ಬೀಗ ಮುರಿದು ಮೊಬೈಲ್‍ಗಳನ್ನು ಕಳ್ಳತನ ಮಾಡಲಾಗಿತ್ತು. ಈ ಮೊಬೈಲ್‍ಗಳನ್ನು ಈ ಮೂವರು ಕಳ್ಳತನ ಮಾಡಿದ್ದು 11 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಅಂಗಡಿಗಳಲ್ಲಿ ಬೀಡಿ, ಸಿಗರೇಟ್, ಸುಗಂಧ ದ್ರವ್ಯ ಬಾಟಲ್ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಲಾಗಿತ್ತು. ಈ ಪ್ರಕರಣಗಳಲ್ಲಿ ಮೂವರು ಭಾಗಿಯಾಗಿದ್ದಾರೆ ಎಂದು ವಿವರಿಸಿದರು.ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಾಧುರಾವ್, ನಾಗರಾಜ, ಕದುರಪ್ಪ, ನವೀನ್, ಪ್ರಸನ್ನಕುಮಾರ್, ಹಾಲೇಶ್, ಬಸವರಾಜ, ಶೇಖರಪ್ಪ, ಕುಮಾರ, ರಾಜಶೇಖರ, ಷಣ್ಮುಖ ಹಾಗೂ ಇತರರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಹೆಚ್ಚುವರಿ ಅಧೀಕ್ಷಕ ಪರಶು ರಾಂ, ಸಿಪಿಐ ಎಸ್.ಟಿ.ಒಡೆಯರ್, ಪೈಜಾವುಲ್ಲ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin