ಎಂಟೆದೆ ರೇಸ್ ಕಾರ್ ಚಾಲಕನ ಮೈನವಿರೇಳಿಸುವ ಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ds

ಚೀನಾದಲ್ಲಿ ನಡೆದ ಮಹಾ ಸಾಹಸವಿದು. ಫಾರ್ಮುಲಾ-ಇ ರೇಸ್ ಕಾರ್ ಚಾಲಕ ಚೀನಾದ ಟಿಯಾನ್‍ಮೆನ್ ಪರ್ವತದಲ್ಲಿ ಮೆಟ್ಟಿಲುಗಳ ಮೇಲೆ ರೇಂಜ್ ರೋವರ್ ಕಾರನ್ನು ಮೇಲ್ಮುಖವಾಗಿ ಚಾಲನೆ ಮಾಡಿ ಎಲ್ಲರನ್ನು ಚಕಿತಗೊಳಿಸಿದಇದು ಟಿಯಾನ್‍ಮೆನ್ ಪರ್ವತ. ಇದನ್ನು ಚೀನಾದ ಸ್ವರ್ಗದ ಬಾಗಿಲು ಎನ್ನುವರು. 11.3 ಕಿ.ಮೀ.ಗಳ ಈ ರಸ್ತೆಗೆ ಡ್ರಾಗನ್ ರೋಡ್ ಎಂಬ ಅನ್ವರ್ಥ ನಾಮವೂ ಇದೆ.

ds-2

ಇಲ್ಲಿ ಏರು ಮುಖವಾಗಿ ಸಹಸ್ರಾರು ಮೆಟ್ಟಿಲುಗಳಿವೆ. ಇವುಗಳನ್ನು ಹತ್ತುವುದು ಒಂದು ಸಾಹಸ. ಇಂಥ ಮೆಟ್ಟಿಲುಗಳನ್ನು ಕಾರಿನ ಮೂಲಕ ಏರುವ ಸಾಹಸದಲ್ಲಿ ಫಾರ್ಮುಲಾ-ಇ ಚಾಲಕ ಹೊ-ಪಿನ್ ಟುಂಗ್ ಯಶಸ್ವಿಯಾಗಿದ್ದಾನೆ. ಚೀನಾದ ರೇಸ್ ಕಾರ್ ಚಾಲಕ ಟಿಯಾನ್‍ಮೆನ್ ಪರ್ವತದಲ್ಲಿ ಮೆಟ್ಟಿಲುಗಳ ಮೇಲೆ ರೇಂಜ್ ರೋವರ್ ಕಾರನ್ನು ಮೇಲ್ಮುಖವಾಗಿ ಚಾಲನೆ ಮಾಡಿ ಎಲ್ಲರನ್ನು ಚಕಿತಗೊಳಿಸಿದ. ಆರಂಭದಿಂದ ಅಂತ್ಯದವರೆಗೆ ಈ ಚಾಲಕ ಅನೇಕ ಎಡರು ತೊಡರುಗಳನ್ನು ದಾಟಿ ಕೊನೆಗೆ ಸಾಧನೆಯ ಮುಗುಳ್ನಗೆ ಬೀರಿದ.

ds-1

Facebook Comments

Sri Raghav

Admin