ಎಂಬ್ರೆಯರ್ ಹಗರಣ : ಇಂಗ್ಲೆಂಡ್ ಮೂಲದ ಶಸ್ತ್ರಾಸ್ತ್ರ ದಲ್ಲಾಳಿ ವಿರುದ್ಧ ಎಫ್‍ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

CBI

ನವದೆಹಲಿ, ಅ.21- ಬ್ರೆಜಿಲ್‍ನ ಎಂಬ್ರೆಯರ್ ಕಂಪನಿಯಿಂದ ವಿಮಾನಗಳ ಖರೀದಿ ವ್ಯವಹಾರ ಕುದುರಿಸಲು 5.70 ದಶಲಕ್ಷ ಡಾಲರ್ ಲಂಚ ಪಡೆದ ಆರೋಪಕ್ಕಾಗಿ ಇಂಗ್ಲೆಂಡ್ ಮೂಲದ ಶಸ್ತ್ರಾಸ್ತ್ರ ದಲ್ಲಾಳಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‍ಐಆರ್ ದಾಖಲಿಸಿದೆ. ಸಿಬಿಐ ತನಿಖೆ ನಡೆಸುತ್ತಿರುವ ಇನ್ನೊಂದು ರಕ್ಷಣಾ ಅವ್ಯವಹಾರದಲ್ಲೂ ಷಾಮೀಲಾಗಿರುವ ಇಂಗ್ಲೆಂಡ್ ಮೂಲಕ ಅನಿವಾಸಿ ಭಾರತೀಯನಾದ ಶಸ್ತ್ರಾಸ್ತ್ರ ದಲ್ಲಾಳಿ 2008ರಲ್ಲಿ ಮೂರು ವಿಮಾನಗಳ ಖರೀದಿಗಾಗಿ ಎಂಬ್ರೆಯರ್‍ನಿಂದ 5.70 ದಶಲಕ್ಷ ಡಾಲರ್ ಲಂಚ ಪಡೆದಿದ್ದರು. ಈ ಸಂಬಂಧ ಅವನ ವಿರುದ್ಧ ಪ್ರಕರಣ ದಾಖಲಾಗಿದೆ.

ಎಂಬ್ರೆಯರ್‍ನ ಸಹಾಯಕ ಸಂಸ್ಥೆಯಿಂದ ಮಧ್ಯವರ್ತಿಯೊಬ್ಬನ ಒಡೆತನದ ಸಿಂಗಪುರ್ ಸಂಸ್ಥೆಯೊಂದರ ಮೂಲದ 2009ರಲ್ಲಿ ಈ ದಲ್ಲಾಳಿಗೆ ಲಂಚಗಳು ಪಾವತಿಯಾಗಿದ್ದವು. ಈ ಸಂಬಂಧ ಸೆಪ್ಟೆಂಬರ್‍ನಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಕೈಗೊಂಡಿತ್ತು. ಈ ಪ್ರಕರಣದಲ್ಲಿ ಸಾಕಷ್ಟು ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇದನ್ನು ಎಫ್‍ಐಆರ್ ಆಗಿ ಪರಿವರ್ತಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ. ರೇಡಾರ್ ವ್ಯವಸ್ಥೆಗಳಿಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) 2008ರಲ್ಲಿ ಎಂಬ್ರೆಯರ್‍ನಿಂದ ಮೂರು ವಿಮಾನಗಳನ್ನು ಖರೀದಿಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin