ಎಂ.ಟಿ.ಕೃಷ್ಣಪ್ಪ ವಿರುದ್ಧ ಲಕ್ಷ್ಮೀನಾರಯಣ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

turvekere

ತುರುವೇಕೆರೆ, ಜ.10- ಇಲ್ಲಿನ ಶಾಸಕರ ದುರಾಡಳಿತದ ವಿರುದ್ದ ತಾಲೂಕಿನ ಜನತೆ ಎಚ್ಚತ್ತುಕೊಂಡಿದ್ದು, ಅವರ ಕಾಲ ಸನ್ನಿಹಿತವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಯಣ್ ವಾಗ್ದಾಳಿ ನಡೆಸಿದ್ದಾರೆ.ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿವತಿಯಿಂದ ಪಕ್ಷಾತೀತವಾಗಿ ಶಾಸಕ ಎಂ.ಟಿ.ಕೃಷ್ಣಪ್ಪಅವರ ದುರಾಡಳಿತದ ವಿರುದ್ದ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಜಾ ಪ್ರಭುತ್ವದಲ್ಲಿ ಶಾಸಕರಷ್ಟೆ ಗ್ರಾಮ ಪಂಚಾಯ್ತಿ ಸದಸ್ಯರಿಗೂ ಅಷ್ಟೆ ಹಕ್ಕಿರುತ್ತದೆ. ಆದರೆ, 13 ವರ್ಷದಲ್ಲಿ ತಾಲೂಕಿನ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯ್ತಿ ಸದಸ್ಯರು ಕೂಡ ನಿರ್ಬಿತಿಯಿಂದ ಕೆಲಸ ಮಾಡಲಾಗಿಲ್ಲಾ. ಶಾಸಕರ ಸರ್ವಾಧಿಕಾರ ಆಡಳಿತದಿಂದ ತಾಲೂಕಿನ ಅಭಿವೃದ್ದಿಯಿಂದ ಸಂಪೂರ್ಣ ಕುಂಟಿತಗೊಂಡಿದೆ ಎಂದು ಆರೋಪಿಸಿದರು.

ಈ ಬಾರಿ ಭೀಕರ ಬರಗಾಲ ಆವರಿಸಿದ್ದು, 33 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾದರೂ ಟಾಕ್ ಪೋರ್ಸ್ ಅಧ್ಯಕ್ಷರಾದ  ಶಾಸಕರು ಕಳೆದ 6 ತಿಂಗಳಿಂದ ಸಭೆ ಕರೆಯದೆ ಜಿಲಾ ಪಂಚಾಯ್ತಿ ಸದಸ್ಯರಿಗೆ ಕೆಲಸ ಮಾಡಲು ಅಡ್ಡಿ ಪಡಿಸಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಅಧ್ಯಕ್ಷ ಮಸಾಲ ಜಯರಾಮ್ ಮಾತನಾಡಿ, ಶಾಸಕರು ಕಾಮಗಾರಿಗಳಲ್ಲಿ ಶೇ.20 ಕಮಿಷನ್ ಪಡೆಯುವ ಮೂಲ ಗುತ್ತಿಗೆದಾರರಿಗೆ ಮುಖ್ಯ ಗುತ್ತಿಗೆದಾರಗಿದ್ದಾರೆ. ನನ್ನ ಆಡಳಿತದಲ್ಲಿ ಲಂಚ ಪಡೆದಿಲ್ಲಾ ಎಂದಾದರೆ ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿವಿಶ್ವನಾಥ್ , ತಾಲೂಕು ಪಂಚಾಯ್ತಿ ಸದಸ್ಯರಾದ ಬೈರಪ್ಪ, ನಂಜೇಗೌಡ, ಮಹಾಲಿಂಗಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವರಾಜು, ಮುಖಂಡರಾದ ಚೌದ್ರಿ ರಂಗಪ್ಪ, ದಾನೀಗೌಡ, ವಕೀಲ ಪ್ರವೀಣ್ ಗೌಡ, ಬುಡನಹಳ್ಳಿ, ಕೃಷ್ನಮೂರ್ತಿ, ವಂಕಟೇಶ್‍ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin