ಎಕ್ಸಿಸ್ ಬ್ಯಾಂಕ್ ಮೇಲೆ ದಾಳಿ : 20 ನಕಲಿ ಖಾತೆಗಳಲ್ಲಿದ್ದ 60 ಕೋಟಿ ಠೇವಣಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Axis-Bank-01

ನವದೆಹಲಿ, ಡಿ.15-ಕಾಳಧನದ ವಿರುದ್ಧ ದೇಶಾದ್ಯಂತ ಸಮರ ಸಾರಿರುವ ಅದಾಯ ತೆರಿಗೆ ಮತ್ತು ಇಡಿ ಅಧಿಕಾರಿಗಳು ಇಂದು ಕೂಡ ದೆಹಲಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ದೆಹಲಿಯ ನೊಯ್ದಾದ ಎಕ್ಸಿಸ್ ಬ್ಯಾಂಕ್ ಶಾಖೆ ಮೇಲೆ ದಾಳಿ ಮಾಡಿ 20 ನಕಲಿ ಖಾತೆಗಳಲ್ಲಿದ್ದ 60 ಕೋಟಿ ಅಕ್ರಮ ಠೇವಣಿಯನ್ನು ಪತ್ತೆ ಮಾಡಲಾಗಿದೆ.  ನಿನ್ನೆ ದೆಹಲಿಯ ಎಚ್‍ಡಿಎಫ್‍ಸಿ ಬ್ಯಾಂಕ್ ಶಾಖೆಯಲ್ಲಿರುವ 150 ಕೋಟಿ ರೂ.ಗಳ ಶಂಕಾಸ್ಪದ ನಗದು ಠೇವಣಿ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಎಕ್ಸಿಸ್ ಬ್ಯಾಂಕ್‍ನಲ್ಲೂ ಬಾರಿ ಅಕ್ರಮ ಪತ್ತೆಯಾಗಿದೆ. .ರಾಜಸ್ತಾನದ ಜೈಪುರದಲ್ಲಿ ಇಬ್ಬರು ಉದ್ಯಮಿಗಳನ್ನು ಬಂಧಿಸಿ 35 ಲಕ್ಷ ರೂ. ಹೊಸ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

ನಿನ್ನೆ ದೆಹಲಿಯ ಎಚ್‍ಡಿಎಫ್‍ಸಿ ಬ್ಯಾಂಕ್ ಶಾಖೆಯಲ್ಲಿರುವ 150 ಕೋಟಿ ರೂ.ಗಳ ಶಂಕಾಸ್ಪದ ನಗದು ಠೇವಣಿ ಬಗ್ಗೆ ಜÁರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಕರೋಲ್‍ಬಾಗ್‍ನ ಹೋಟೆಲ್ ಒಂದರ ಮೇಲೆ ಮೊನ್ನೆ ತಡ ರಾತ್ರಿ ದಾಳಿ ನಡೆಸಿ ದಾಖಲೆಗಳಿಲ್ಲದ 3.25 ಕೋಟಿ ರೂ.ಗಳನ್ನು ವಶಪಡಿಸಿಕೊಂಡು, ಐವರನ್ನು ಬಂಧಿಸಲಾಗಿತ್ತು.

Eesanje News App

Facebook Comments

Sri Raghav

Admin