ಎಚ್ಚರ, ಇದು ಹೃದಯಗಳಾ ವಿಷಯ..!

ಈ ಸುದ್ದಿಯನ್ನು ಶೇರ್ ಮಾಡಿ

Heart

ಯಾವುದೇ ಕಾಯಿಲೆ ಬಗ್ಗೆ ರೋಗಿಗಳಲ್ಲಿ ಜಾಗೃತಿ ಮೂಡಿಸಲು ವೈದ್ಯರು-ರೋಗಿಗಳ ನಡುವೆ ಉತ್ತಮ ಬಾಂಧವ್ಯ ಮೂಡಿಸುವುದು ಬಹಳ ಅನಿವಾರ್ಯ.   ಅದರಲ್ಲೂ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೈದ್ಯರ ಹಾಗೂ ರೋಗಿಗಳ ನಡುವೆ ಸಾಕಷ್ಟು ಇಂತಹಸಂಬಂಧ ವೃದ್ಧಿಸಬೇಕಿದೆ.   ಅವರ ಸಲಹೆ-ಸೂಚನೆಯೊಂದಿಗೆ ರೋಗಿಗಳ ಅನುಮಾನ-ಆತಂಕಗಳು ದೂರ  ಮಾಡಿಕೊಂಡು ಸಾಮಾನ್ಯ ಜೀವನ ನಡೆಸಲು ಸಹಕಾರಿಯಾಗಬೇಕೆಂಬ ಉದ್ದೇಶ ಇದರ ಹಿಂದಿದೆ.   ಹೃದಯ ರೋಗಿಗಳು ತಜ್ಞರ ಬಳಿ ಹೋದಾಗ ತಮಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ವಿಚಾರಿಸಿದಾಗ ಹೃದಯ ತಜ್ಞರು ಹೇಳುವ ವಿಷಯವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ಇದರಿಂದ ತೊಂದರೆಯೇ ಹೆಚ್ಚು. ಹಾಗಾಗಿ ವೈದ್ಯರ ಸಲಹೆ-ಸೂಚನೆ ಅರಿಯಲು ಸಾಕಷ್ಟು ಮಾಹಿತಿಯನ್ನು ನಮ್ಮ ಕಾಯಿಲೆ ಬಗ್ಗೆ ತಿಳಿದುಕೊಳ್ಳಬೇಕಿದೆ. ಉದಾಹರಣೆಗೆ ಹೃದಯ ಕಾಯಿಲೆಗೆ ಸಂಬಂಧಿಸಿದ ಕೊಲೆಸ್ಟ್ರಾಲ್, ಹೃದಯ ವೈಫಲ್ಯ ಹೀಗೆ ಎಲ್ಲದರ ಜಾಗೃತಿ ರೋಗಿಗಳಿಗಿದ್ದರೆ ಉತ್ತಮ ಎಂದು ವೈದ್ಯರೇ ಹೇಳುತ್ತಾರೆ. ರೋಗಿಗಳಿಗೆ ಸಾಮಾನ್ಯವಾಗಿ ವೈದ್ಯರು ಬರೆಯಲು ಸಲಹೆ ನೀಡುತ್ತಾರೆ. ಅದರಲ್ಲಿ ಒಂದು ಅವರ ಕಳವಳ ಮತ್ತು ಸಂಶಯಗಳು, ಇನ್ನೊಂದು ತಮ್ಮ ಆರೋಗ್ಯದ ಕುರಿತ ಗಮನಿಸುವಿಕೆಗಳು ಮತ್ತು ಮತ್ತೊಂದು ತಾವು ತೆಗೆದುಕೊಳ್ಳುವ ಎಲ್ಲ ಔಷಧಿಗಳು.

ಇದು ವೈದ್ಯರಿಗೆ ರೋಗಿಗಳ ಬಗ್ಗೆ ಅವರತ್ತ ಹೆಚ್ಚು ಸಮಯ ನೀಡಲು ನೆರವಾಗುತ್ತದೆ. ಇದರಿಂದ ರೋಗಿಗಳು ತಮ್ಮ ಹೃದಯ ಮತ್ತು ವೈದ್ಯರನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ. ಇದು ಆರೋಗ್ಯದ ಜಾಗೃತಿಯಲ್ಲಿ ದೂರದ ಹಾದಿ ಕ್ರಮಿಸಲಿದೆ ಎಂದು ವೈದ್ಯರೇ ಅಭಿಪ್ರಾಯಪಡುತ್ತಾರೆ.   ಹೃದಯ ಸ್ನಾಯು: ಹೃದಯದ ಸ್ನಾಯುಗಳು ಹೃದಯ ಮತ್ತು ಸಂಕುಚಿತ ಕ್ರಿಯೆ ಅನೈಚ್ಛಿಕವಾಗಿ ರೂಪಿಸುತ್ತದೆ.   ಕೊಲೆಸ್ಟ್ರಾಲ್: ದೇಹದಿಂದ ಉತ್ಪಾದಿಸಲ್ಪಡುವ ಮೇಣದ ವಸ್ತು ಇದಾಗಿದೆ ಮತ್ತು ನಿರ್ದಿಷ್ಟ ಆಹಾರಗಳಲ್ಲೂ ಲಭ್ಯವಿದೆ.  ಕೊಲೆಸ್ಟ್ರಾಲ್ ಎಂಬುದು ಒಂದು ಕೆಟ್ಟ ಶಬ್ದವಲ್ಲ? ಇದು ಹಾರ್ಮೋನ್ ಮತ್ತು ವಿಟಮಿನ್ ಡಿ ರೂಪಿಸುವಿಕೆಗಳಲ್ಲಿ ಇದು ಅಗತ್ಯ. ರಕ್ತದಲ್ಲಿ ಕೊಲೆಸ್ಟ್ರಾಲ್ ತೀರಾ ಹೆಚ್ಚಿದಾಗ ಅದನ್ನು ಅಧಿಕ ರಕ್ತದ ಕೊಲೆ ಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಇದು ಕಾಲಾನಂತರದಲ್ಲಿ ಅಪಧಮನಿಗಳನ್ನು ತಡೆಯೊಡ್ಡಬಲ್ಲದು. ಹೃದಯದ ಕಾಯಿಲೆಯ ಅಪಾಯ ಹೆಚ್ಚಿಸಬಹುದು.   ಹೃದಯದ ಕಾಯಿಲೆ/ಪರಿಧಮನಿ ಕಾಯಿಲೆ ಅಥೆರೋಸ್ಕ್ಲೈರಾಸಿಸ್: ಅಪಧಮನಿಗಳೊಳಗೆ ಹೃದಯದತ್ತ ಪ್ಲೇಕ್‍ಗಳು ನಿರ್ಮಾಣಗೊಂಡಾಗ ಅಪಧಮನಿಗಳು ಬಿಗಿಯಾಗುತ್ತವೆ. ಇದು ಅನಾರೋಗ್ಯಕರ ಕೊಬ್ಬಿನೊಂದಿಗಿನ (ಟ್ರಾನ್ಸ್ ಫ್ಯಾಟ್) ಆಹಾರ ಸೇವನೆ, ಅತಿಯಾದ ಕೊಬ್ಬಿನ ಆಹಾರಗಳು, ವ್ಯಾಯಾಮದ ಕೊರತೆ ಮತ್ತು ಧೂಮಪಾನದಿಂದ ಇದು ಉಂಟಾಗುತ್ತದೆ.

ಹೃದಯಾಘಾತ/ಹೃದಯದ ಸ್ನಾಯುವಿನ ಊತದಿಂದ ಸಾವು/ಪರಿಧಮನಿ ಹೆಪ್ಪುಗಟ್ಟುವಿಕೆ ಅಥವಾ ಮುಚ್ಚುವಿಕೆ: ಹೃದಯದತ್ತ ಹೋಗುವ ಅಪಧಮನಿಗಳು ತಡೆಯನ್ನು(ರಕ್ತ ಕೊರತೆ) ಹೊಂದಿದ್ದಾಗ, ಹೃದಯದ ಸ್ನಾಯು ಆಮ್ಲಜನಕದ ಕೊರತೆಯಿಂದ ಬಳಲುತ್ತದೆ. ಬಳಿಕ ಹೃದಯದ ಅಂಗಾಂಶ ಸಾಯುತ್ತದೆ. ಗಾಯಗೊಂಡ ಭಾಗವು ಆರೈಕೆಯೊಂದಿಗೆ ಮತ್ತು ಸಮಯ ಕಳೆದಂತೆ ಗುಣವಾಗುತ್ತದೆ. ಆದರೆ ಗಾಯ ಇರುತ್ತದೆ, ಹೃದಯಾಘಾತವನ್ನು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಇದು ಹೃದಯದ ಸ್ನಾಯುವಿಗೆ ದೊಡ್ಡ ಹಾನಿ ಉಂಟು ಮಾಡುತ್ತದೆ. ಇದು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ.
ಹೃದಯ ವೈಫಲ್ಯ:

ಹೃದಯದ ಸ್ನಾಯು ಪಂಪಿಂಗ್ ಮಾಡುವುದನ್ನು ನಿಲ್ಲಿಸಿದಾಗ? ಸಾಕಷ್ಟು ರಕ್ತ ತುಂಬದೇ ಇದ್ದಾಗ ಅಥವಾ ದೇಹಕ್ಕೆ ರಕ್ತ ಪಂಪ್ ಮಾಡಲು ಸಾಧ್ಯವಾಗದೇ ಇದ್ದಾಗ ಕೆಲವು ಜನರು ಕೇವಲ ಒಂದನೇ ಹೊಂದಿರುತ್ತಾರೆ. ಕೆಲವರು ಎರಡನ್ನೂ ಹೊಂದಿರುತ್ತಾರೆ. ಬೊಜ್ಜು, ಹೃದಯ ಕಾಯಿಲೆ ಮತ್ತು ಮಧುಮೇಹ ಪ್ರಮುಖ ಕಾರಣಗಳಾಗಿರುತ್ತವೆ.   ಆಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಸರ್ಜರಿಯಂತಹ ಯಶಸ್ವಿ ಚಿಕಿತ್ಸೆಗಳೊಂದಿಗೆ ಹೃದಯಾಘಾತದಿಂದ ಪಾರಾದ ರೋಗಿಗಳು, ಇಂದು ದೀರ್ಘಕಾಲ ಮತ್ತು ಉತ್ಪಾದಕ ಜೀವನ ಸಾಗಿಸಬಲ್ಲರು. ಆದರೆ ಆ ವೇಳೆ ಉಂಟಾದ ಹಾನಿಯು ಹೃದಯ ವೈಫಲ್ಯಕ್ಕೆ ಈಡಾಗುವಂತಿರುತ್ತದೆ.  ಹೃದಯ ಸ್ತಂಭನ: ಹೆಚ್ಚಾಗಿ ಅನಿಯಮಿತ ಹೃದಯದ ಲಯದಿಂದಾಗಿ(ಎರಿತ್ಮಿಯಾ) ಉಂಟಾಗುತ್ತದೆ. ಇದು ಹೃದಯದ ಎಲೆಕ್ಟ್ರಿಕ್ ಸಕ್ರ್ಯೂಟ್‍ನಿಂದಾಗುವ ಸಮಸ್ಯೆಯಾಗಿದೆ. ಈ ಪ್ರಕರಣದಲ್ಲಿ ಸಾವು ಅತ್ಯಂತ ಸಾಮಾನ್ಯವಾಗಿರುತ್ತದೆ. ವಿಶೇಷವಾಗಿ ಯುವ ಜನರಲ್ಲಿ , ಇದಕ್ಕೆ ಧೂಮಪಾನ ದೊಡ್ಡ ಕಾರಣ.
ನಿಷ್ಕಾಸ ಅಂಶ: ಹೃದಯದ ಪಂಪಿಂಗ್ ಸಾಮಥ್ರ್ಯದ ಅಳತೆಯನ್ನು ನಿಷ್ಕಾಸ ಅಂಶ ಎಂದು ಕರೆಯಲಾಗುತ್ತದೆ. ಇದು ಹೃದಯವು ಹೃದಯ ವೈಫಲ್ಯಕ್ಕೆ ತುತ್ತಗುವಂತಿದೆಯೇ ಎಂದು ಸೂಚಿಸುತ್ತದೆ. 40ಕ್ಕಿಂತ ಕಡಿಮೆಯ ಇಎಫ್, ಹೃದಯ ವೈಫಲ್ಯ ಅಥವಾ ಕಾರ್ಡಿಯೋಮಯೋಪಥಿಯನ್ನು ಸೂಚಿಸುತ್ತದೆ.
ಇಎಫ್ ಶೇ.35ಕ್ಕಿಂತ ಕಡಿಮೆ ಇದ್ದಾಗ ಇದು ಆಕಸ್ಮಿಕ ಹೃದಯ ಸಂಬಂಧಿ ಸಾವನ್ನು ತಡೆಗಟ್ಟಲು ಕಾರ್ಡಿಯೋವರ್ಟರ್ ಡಿಫೈಬ್ರಿಲೇಟರ್(ಐಸಿಡಿ) ಅಥವಾ  ಕಾರ್ಡಿಯಿಕ್ ರಿಸಿಂಕ್ರನೈಝೇಶನ್ ಥೆರಪಿ ಡಿವೈಸ್‍ಗಳಂತಹ (ಸಿಆರ್‍ಟಿಪಿಗಳು, ಸಿಆರ್‍ಟಿಡಿಗಳು) ಸಾಧನಗಳ ಬಳಕೆಯ ಅಗತ್ಯವನ್ನು ಇದು ಸೂಚಿಸುತ್ತದೆ.  ಹೃದಯಾಘಾತದಿಂದ ಬಳಲುವವರು ಅಥವಾ ಸಿಎಡಿ ಹೊಂದಿರುವವರು, ವಿಶೇಷವಾಗಿ, ಉಸಿರು ಕಟ್ಟಿದ ಅನುಭವ, ದಣಿವು ಅಥವಾ ಮೂರ್ಛೆಯ ಲಕ್ಷಣಗಳನ್ನು ಹೊಂದಿದ್ದರೆ ನಿಯಮಿತವಾಗಿ ಇಎಫ್‍ನ ನಿಗಾ ಹೊಂದಿರಬೇಕಾಗುತ್ತದೆ.
ಇಂತಹ ಹಲವಾರು ಸಲಹೆ ಸೂಚನೆ ದೊರೆಯಲು ರೋಗಿ ಹಾಗೂ ವೈದ್ಯನ ಬಾಂಧವ್ಯ ಅತಿ ಮುಖ್ಯ.

Facebook Comments

Sri Raghav

Admin