ಎಚ್ಚರ, ನಾಡವಿರೋಧಿ ಚಟುವಟಿಕೆ ನಡೆಸುವ ಬೆಳಗಾವಿ ಪಾಲಿಕೆ ಸದಸ್ಯರ ಸದಸ್ಯತ್ವ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

Roshan-baig
ಬೆಳಗಾವಿ, ಮೇ 22-ಇನ್ನು ಮುಂದೆ ಬೆಳಗಾವಿ ಪಾಲಿಕೆ ಸದಸ್ಯರು ನಾಡ ವಿರೋಧಿ ಚಟುವಟಿಕೆ ನಡೆಸಿದರೆ ಸದಸ್ಯತ್ವ ರದ್ದಾಗಲಿದೆ ಎಂದು ಸಚಿವ ರೋಷನ್ ಬೇಗ್ ಎಚ್ಚರಿಸಿದ್ದಾರೆ.  ನಾಡವಿರೋದಿ ಚಟುವಟಿಕೆಯನ್ನು ನಡೆಸದಂತೆ ಹೊಸ ಕಾಯ್ದೆ ತರಲಾಗುತ್ತಿದ್ದು, ಇದರಿಂದ ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಪುಂಡಾಟಕ್ಕೆ ಬ್ರೇಕ್ ಬೀಳಲಿದೆ.  ಪಾಲಿಕೆಯಲ್ಲಿ ಸದಸ್ಯರು ನಾಡವಿರೋಧಿ ಕೆಲಸಗಳಿಗೆ ಜೈಕಾರ ಹಾಕಿದರೆ ಸದಸ್ಯತ್ವ ರದ್ದು ಮಾಡುತ್ತೇವೆ ಎಂದು ತಿಳಿಸಿದರು.


 

ದಲಿತರ ಮನೆಯಲ್ಲಿ ಹೊಟೇಲ್ ಊಟ: ದಲಿತರ ಮನೆಗೆ ಹೋಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶೋ ಮಾಡುತ್ತಿದ್ದಾರೆ. ಅವರ ಮನೆಗೆ ಹೋಗಿ ಹೊಟೇಲ್‍ನ ಇಡ್ಲಿ ತಿಂದಿದ್ದಾರೆ. ದಲಿತರ ಮನೆಯ ಊಟ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲಿಗೆ ಹೋದರೂ ಹೊಟೇಲ್ ತಿಂಡಿಯೇ ಬೇಕೇ? ಎಂದು ಟೀಕಿಸಿರುವ ಅವರು, ಈಶ್ವರಪ್ಪ-ಯಡಿಯೂರಪ್ಪ ನಡುವಿನ ಕಚ್ಚಾಟ ಮರೆಸಲು ಮಳೆಗಾಲದಲ್ಲಿ ಬರದ ಪ್ರವಾಸ ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin